ಒಂದು ಒಳ್ಳೆಯ ನುಡಿ - 152

ಒಂದು ಒಳ್ಳೆಯ ನುಡಿ - 152

"ಅಮ್ಮಾ" ಎಂದರೆ ದೇವರು ಎಂಬ ಮನದಾಳದ ಮಾತು."ಅಮ್ಮನ" ಬೇಲೆ ಅನಾಥರಿಗೆ ಮಾತ್ರ ಗೊತ್ತು, "ಅಮ್ಮ" ಇಲ್ಲದವರು ನೋವನ್ನು ಅನುಭವಿಸಿದರೆ, ಇದ್ದವರು ಕೆಲವರು ಅನಾಥಾಶ್ರಮದಲ್ಲಿಟ್ಟು ಯಾವ ಸಂತೋಷ ಅನುಭವಿಸುತ್ತಾರೆ? ಆ ಕಾಣದ ದೇವರಿಗೆ ಗೊತ್ತು, ಆಳವಾಗಿ ವಿಚಾರ ಮಾಡುವ ವಿಷಯ "ಅಮ್ಮಾ"

ಭೇಧಭಾವ ರಹಿತ "ಅಮ್ಮಾ"

ಕಷ್ಟದಲ್ಲಿ ಸಂಕಟ ಪಡುವ "ಅಮ್ಮಾ" 

ಸುಖಃದಲ್ಲಿ ಖುಷಿ ಪಡುವ "ಅಮ್ಮಾ" 

ಬಿದ್ದಾಗ ಮೆಲೆತ್ತುವ "ಅಮ್ಮಾ" 

ಎದ್ದಾಗ ಹೆಮ್ಮೆ ಪಡುವ "ಅಮ್ಮಾ"

ಸೋತಾಗ ದೈರ್ಯ ಕೊಡುವ "ಅಮ್ಮಾ" 

ಗೆದ್ದಾಗ ನಲಿದಾಡುವ "ಅಮ್ಮಾ"

ಪ್ರಾಣಕ್ಕೆ ಪ್ರಾಣ ಕೊಡುವ "ಅಮ್ಮಾ" 

ನೀ ಇಲ್ಲದ ಜೀವನ ಯಾತನಾಮಯ 

ಗರ್ಭದಲ್ಲಿ ಜೋಪಾನ ಮಾಡುವ "ಅಮ್ಮಾ" 

ಪ್ರಾಣ ಪಣವಾಗಿಟ್ಟು ಲೋಕಕ್ಕೆ ತಂದ "ಅಮ್ಮಾ" 

ಎದೆಹಾಲು ಉಣಿಸಿದ "ಅಮ್ಮಾ" 

ಬಗಲಲ್ಲಿ ಹೊತ್ತು ತಿರುಗಿದ "ಅಮ್ಮಾ"

ಕಣ್ಣಲ್ಲಿ ಕಣ್ಣಿಟ್ಟ ಕಾವಲಿಗಾರ "ಅಮ್ಮಾ"

ಕೈ ತುತ್ತು ತಿನಿಸಿದ "ಅಮ್ಮಾ"

ನಮ್ಮ ಬೆಳವಣಿಗೆಗೆ  ಜೀವ ಸವಿಸಿದ "ಅಮ್ಮಾ" 

ಅಲ್ಲಿಯವರಿಗಿನ "ಅಮ್ಮಾ"

ಮದುವೆ ಮಾಡಿದ ಮೆಲೆ ನೀನು ಪರಕೀಯಳಾಗುವ "ಅಮ್ಮಾ" ಆಗ ನಿನ್ನ ನೋವನ್ನು ಬಚ್ಚಿಟ್ಟು ಹೊತ್ತು ಕಳೆಯುವ "ಅಮ್ಮಾ"

ಮಗ ಹೊರಗಿನಿಂದ ಬಂದರೆ ಮರೆಯಲ್ಲಿ ಇಣುಕಿ ನೋಡುವ "ಅಮ್ಮಾ"

ಹೆಣ್ಣು ಮಕ್ಕಳ ದಾರಿ ಕಾಯುವ "ಅಮ್ಮಾ" 

ಎಲ್ಲ ಕೆಲಸವನ್ನು ಮುಗಿಸಿದ ಮೆಲೆ ಎಲೆ ಮರೆಯ ಕಾಯಿಯಾಗಿ ಹಾರೈಸುವ "ಅಮ್ಮಾ"

ನಾ ಎಷ್ಟೊಂದು ಹೆಳಲಿ ಈ ನಿನ್ನ ಬತ್ತದ ಭಾವನೆಯ ಮಹಾ ಪರ್ವ ಯಾವತ್ತು ಹಾರೈಸುವ ಹೃದಯ ನೀ "ಅಮ್ಮಾ".

-ಶರಣೆ ಶ್ರೀಮತಿ ಸಂಗೀತಾ ಪಾಟೀಲ, ಚಿಕ್ಕೋಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ