ಒಂದು ಒಳ್ಳೆಯ ನುಡಿ - 173
* ಕೆಟ್ಟವರಿಗೆ ಯಾವತ್ತೂ ರಕ್ಷಣೆ ಕೊಡಬಾರದು. ಸಾಧ್ಯವಾದರೆ ಸರಿದಾರಿಗೆ ತರಲು ಪ್ರಯತ್ನಿಸಬೇಕು. ಅವರನ್ನು ಕಾಪಾಡಲು ನೋಡಿದರೆ ಸಜ್ಜನರಿಗೆ, ಒಳ್ಳೆಯವರಿಗೆ ದ್ರೋಹ ಮಾಡಿದಂತೆ, ಮಾನಸಿಕವಾಗಿ ಕೊರಗಲು, ಚಿಂತಿಸಲು, ವೇದನೆ ಪಡಲು ಸಹಕರಿಸಿದಂತೆ ಆಗುವುದು. ಅದಕ್ಕಿಂತ ದೊಡ್ಡ ಹಿಂಸೆ ಬೇರೊಂದಿಲ್ಲ.
* ತನ್ನ ಮನಸ್ಸಿನ ಮೇಲೆ ತನಗೆ ಹಿಡಿತ ಇಲ್ಲದವನು, ಬೇರೆಯವರ ಮನಸ್ಸಿನ ಹಿಡಿತದ ಬಗ್ಗೆ ಹೇಗೆ ಹೇಳಲು ಸಾಧ್ಯ? ಹಿಡಿತವಿಲ್ಲದ ವ್ಯಕ್ತಿ ಇತರರ ಮಾತನ್ನು ನಂಬುವುದು ಹೆಚ್ಚು. ಅವನು ಸ್ವತಂತ್ರ ಅಂಥ ಅನಿಸುವುದೇ ಇಲ್ಲ. ಮನಸ್ಸು ನಮ್ಮ ಕೈಯಲ್ಲಿ,ಬುದ್ಧಿಯಲ್ಲಿ ಇಲ್ಲದಾಗ ಎಲುಬಿಲ್ಲದ ನಾಲಿಗೆ ಬೇಕಾದಂತೆ ಮಾತನಾಡಲು ಪ್ರಾರಂಭಿಸಬಹುದು. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಮನಸ್ಸಿನ ಹಿಡಿತ ತಪ್ಪಿದಾಗ ಕೋಪದ ಕೈಗೆ ಬುದ್ಧಿ ಕೊಟ್ಟ ಹಾಗೆ. ಸಿಟ್ಟಿನಲ್ಲಿ ಯಾವುದೇ ನಿರ್ಣಯ ಮಾಡಿದರೂ ಅಪಾಯವೇ. ಆ ಮೇಲೆ ಪಶ್ಚಾತ್ತಾಪ ಪಟ್ಟರೇನು ಪ್ರಯೋಜನವಿಲ್ಲ. ಮನಸ್ಸಿನ ಮೇಲೆ ಹಿಡಿತ ಸಾಧಿಸುವವ, ಸ್ಥಿತಪ್ರಜ್ಞ ಯಾವತ್ತೂ ಶ್ರೇಷ್ಠ ಅನಿಸಲ್ಪಡುತ್ತಾನೆ.
* ನೆರಳು ಮತ್ತು ಬೆಳಕು ಒಂದನ್ನೊಂದು ಬಿಟ್ಟಿರಲಾರವು. ಅದೇ ರೀತಿ ಓರ್ವ ವ್ಯಕ್ತಿ ಮತ್ತು ಆತನ ದುಡಿಮೆ ಸಹ ಒಂದಕ್ಕೊಂದು ಪೂರಕ.
*ಯಥಾ ಛಾಯಾತಪೌ ನಿತ್ಯಂ ಸುಸಂಬದ್ಧೌ ಪರಸ್ಪರಮ್/*
*ಏವಂ ಕರ್ಮ ಚ ಕರ್ತಾ ಚ ಸಂಶ್ಲಿಷ್ಟಾವಿತರೇತರಮ್//*
ನೆರಳು --ಬೆಳಕುಗಳಾಟವನ್ನು ಎದುರಿಸಿ ಮುಂದಿನ ಹಾದಿ ಕ್ರಮಿಸೋಣ.
(ಶ್ಲೋಕ:ಸುಭಾಷಿತ ಸಂಗ್ರಹ)
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ