ಒಂದು ಒಳ್ಳೆಯ ನುಡಿ (225) - ಕಣ್ಣೀರು
ಈ ಕಣ್ಣೀರಿಗೂ ಕೂಡ ಎಷ್ಟು ಬೆಲೆ ಇದೆ ಗೊತ್ತಾ? ನಾವು ಸುಮ್ಮನೆ ಬೇಡದಕ್ಕೆಲ್ಲಾ ಅಳುತ್ತಾ ಹಾಳು ಮಾಡುತ್ತೇವೆ. ಯಾವಾಗಲೂ ಅಳುತ್ತಿದ್ದರೆ ಅದಕ್ಕೆ ಅರ್ಥವೇ ಇಲ್ಲ. ಪ್ರೀತಿ ಕೈಕೊಟ್ಟಾಗ ಅಬ್ಬಾ..ನಮ್ಮ ಅಬತರವೇ. ಈ ಕಣ್ಣುಗಳಿಂದ ನೋಡುವುದಕ್ಕಾಗುವುದಿಲ್ಲ. ಅವರಿಲ್ಲದೆ ನಮ್ಮ ಜೀವನ ಮುಗಿದೇ ಹೋಯ್ತು...ಅನ್ನೂ ರೀತಿ ಆಡುತ್ತೇವೆ. ಇಡೀ ದಿನ ಕೂತು ಅಳುತ್ತೇವೆ. ಅವರಿಗೆ ಮಾತ್ರ ನಮ್ಮ ಕಣ್ಣೀರು, ನೋವಿನ ಬಗ್ಗೆ ಬಿದ್ದೇ ಹೋಗುವುದಿಲ್ಲ. ಅಷ್ಟು ಆರಾಮಾಗಿ ಇರುತ್ತಾರೆ. ಕೆಲವೊಮ್ಮೆ ಅಪ್ಪ, ಅಮ್ಮ ಮಕ್ಕಳ ಬಗ್ಗೆ ಯೋಚಿಸಿ ಕಣ್ಣೀರಿಡುತ್ತಾರೆ. ಇದಕ್ಕೆ ಪ್ರೀತಿ ಅನ್ನೋದು. ಅವರು ನಿಜವಾಗಿಯೂ ನಮ್ಮ ನೋವಿಗೆ ಕಣ್ಣೀರು ಹಾಕಿದರೆ ನಾಟಕ ಅಂತ ಹೇಳುತ್ತೇವೆ. ಯಾವುದು ಸತ್ಯ, ಯಾವುದು ಸುಳ್ಳು? ನಮಗೆ ಒಂದೂ ಗೊತ್ತಿಲ್ಲ. ಒಟ್ಟಾರೆಯಾಗಿ ಎಲ್ಲದಕ್ಕೂ ಗೊಳೋ ಅಂತ ಕಣ್ಣೀರು ಬರುತ್ತದೆ.
ರಾಜಕಾರಣಿಗಳೂ ಬಹಳ ಭಾವುಕರಾದಾಗ ಕಣ್ಣೀರು ಹಾಕುತ್ತಾರೆ. ಆದರೆ ಇವರದ್ದು ಮೊಸಳೆ ಕಣ್ಣೀರು. ಒಂದು ಪೈಸೆಗೂ ನಂಬಲು ಸಾಧ್ಯವಿಲ್ಲ. ಕಳೆದ ಹಲವಾರು ದಶಕಗಳಿಂದ ಮತದಾರ ಈ ಕಣ್ಣೀರನ್ನೇ ನಿಜವೆಂದು ನಂಬಿ ಮತ ಹಾಕಿ ಇಂಥವರನ್ನು ಆಯ್ಕೆ ಮಾಡುತ್ತಲೇ ಬಂದಿದ್ದಾನೆ. ಇವರೂ ಮತದಾರರ ಭಾವನೆಯನ್ನು ದುರುಪಯೋಗ ಪಡಿಸಿ, ಗೆದ್ದ ಬಳಿಕ ಮತದಾರರನ್ನು ಕಣ್ಣೀರು ಹಾಕುವಂತೆ ಮಾಡುತ್ತಾ ಬಂದಿದ್ದಾರೆ. ನಾವೆಲ್ಲಾ ಬುದ್ದಿ ಕಲಿಯುವುದು ಯಾವಾಗವೋ? ಒಂದೂ ತಿಳಿಯುತ್ತಿಲ್ಲ.
-ಆರುಷಿ ನಾಯಕ್
ಚಿತ್ರ ಕೃಪೆ: ಇಂಟರ್ನೆಟ್ ತಾಣ