ಒಂದು ಒಳ್ಳೆಯ ನುಡಿ (228) - ಪರಿಸರ ಸ್ನೇಹಿ ಜೀವನ ಕ್ರಮ
* ಕುದುರೆ ಕುಡಿಯುವ ಸ್ಥಳದಲ್ಲಿ ನೀರು ಕುಡಿಯಿರಿ. ಕುದುರೆ ಎಂದಿಗೂ ಕೆಟ್ಟ ನೀರನ್ನು ಕುಡಿಯುವುದಿಲ್ಲ.
* ಬೆಕ್ಕು ಶಾಂತಿಯುತವಾಗಿ ಮಲಗಿರುವಲ್ಲಿ ನಿಮ್ಮ ಹಾಸಿಗೆಯನ್ನು ಹಾಕಿಕೊಳ್ಳಿ
* ಎರೆಹುಳುಗಳು ಸ್ಪರ್ಶಿಸಿದ ಹಣ್ಣುಗಳನ್ನು ತಿನ್ನಿರಿ.
* ಕೀಟಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಅಣಬೆಗಳು ನಿರ್ಭಯವಾಗಿ ಬೆಳೆಯುವುದು,
* ಹೆಗ್ಗಣವು ತೋಡಿದ ಸ್ಥಳದಲ್ಲಿ ಮರವನ್ನು ನೆಡಬೇಕು,
* ಗಾಳಿ ಬಿಸಿಲಿರುವೆಡೆಯಲ್ಲಿ ಮನೆಯನ್ನು ನಿರ್ಮಿಸಿ.
* ಪಕ್ಷಿಗಳು ಬಿಸಿಲಿನ ಶಾಖದಿಂದ ಮುಚ್ಚಿಕೊಳ್ಳಲು ಕೂರುವ ಜಾಗದಲ್ಲಿ ಬಾವಿಯನ್ನು ತೋಡಿ
* ನಿತ್ಯವೂ ಹಕ್ಕಿಗಳು ಮಲಗುವ ಸಮಯಕ್ಕೆ ಮಲಗಿ, ಅವು ಏಳುವ ಸಮಯಕ್ಕೆ ಏಳಿರಿ, ನೀವು ಜೀವನದಲ್ಲಿ ಚಿನ್ನದಂತಹಾ ಬೆಳೆಯನ್ನು ಪಡೆಯುವಿರಿ.
* ಕಾಡುಗಳ ಆತ್ಮದಂತೆ ರೋಗ ನಿರೋಧಕ ಬಲವಾದ ಶರೀರ ಮತ್ತು ಹೃದಯವನ್ನು ಪಡೆಯಲು ಹೆಚ್ಚು ಹಸಿರನ್ನು ಸೇವಿಸಿ.
* ಹೆಚ್ಚು ಹೆಚ್ಚು ಆಕಾಶವನ್ನು ನೋಡುತ್ತಿರಿ ಮತ್ತು ಕಡಿಮೆ ಮಾತನಾಡಿ, ಇದರಿಂದ ಮೌನವು ನಿಮ್ಮ ಹೃದಯವನ್ನು ಪ್ರವೇಶಿಸಬಹುದು, ನಿಮ್ಮ ಆತ್ಮವು ಶಾಂತಿಯಿಂದ ಕೂಡಿರುತ್ತದೆ ಮತ್ತು ನಿಮ್ಮ ಜೀವನವು ಶಾಂತಿಯಿಂದ ತುಂಬಿರುತ್ತದೆ.
(ಸಂಗ್ರಹ) - ಪ್ರಭಾಕರ ಅಡಿಗ, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ