ಒಂದು ಒಳ್ಳೆಯ ನುಡಿ - 239

ಒಂದು ಒಳ್ಳೆಯ ನುಡಿ - 239

ಒಬ್ಬ ಮನಶಾಸ್ತ್ರಜ್ಞ (Anthropologist) ಆಫ್ರಿಕನ್ ಬುಡಕಟ್ಟಿನ ಮಕ್ಕಳಿಗೆ ಒಂದು ಆಟದ ಬಗ್ಗೆ ಹೇಳುತ್ತಾನೆ. ಅವನು ದೊಡ್ಡ ಮರವೊಂದರ ಬುಡದ ಬಳಿ ಒಂದು ಬುಟ್ಟಿಯಷ್ಟು ರುಚಿಕರವಾದ ಹಣ್ಣುಗಳನ್ನು ಇಟ್ಟು ಮಕ್ಕಳಿಗೆ ಹೇಳುತ್ತಾನೆ, "ಯಾರೂ ಮೊದಲು ಮರದ ಬಡದ ಬುಟ್ಟಿ ಮುಟ್ಟುತ್ತಾರೋ ಅವರಿಗೆ ಆ ಬುಟ್ಟಿ ಸಹಿತ ಅದರಲ್ಲಿನ ಎಲ್ಲಾ ಹಣ್ಣುಗಳು!" ನಂತರ ಓಟದ ಸ್ವರ್ಧೆಗೆ ಸಂಕೇತ ನೀಡುತ್ತಾನೆ. ಆಗ ಮಕ್ಕಳು ಎಲ್ಲರೂ ಕೈಹಿಡಿದು ನಡೆಯುತ್ತಾ ಹೋಗಿ ಎಲ್ಲರೂ ಒಮ್ಮೆಲೇ ಬುಟ್ಟಿ ಮುಟ್ಟುತ್ತಾರೆ.‌ ನಂತರ ಎಲ್ಲರಿಗೂ ಆ ಹಣ್ಣುಗಳೆಂದು, ಸಮನಾಗಿ ಹಂಚಿಕೊಳ್ಳುತ್ತಾರೆ. ಇದನ್ನು ನೋಡಿ ಮನಶಾಸ್ತ್ರಜ್ಞ ಚಕಿತನಾಗುತ್ತಾನೆ.

"ನಿಮ್ಮಲ್ಲಿ ಯಾರಾದರು ಒಬ್ಬರು ವೇಗವಾಗಿ ಓಡಿ ಸ್ಪರ್ಧೆಯಲ್ಲಿ ಗೆದ್ದು, ಆ ಹಣ್ಣುಗಳ ಮೇಲೆ ಪೂರ್ಣ ಹಕ್ಕು ಸಾಧಿಸುವ‌ ಅವಕಾಶವಿದ್ದಾಗ ಅದನ್ನು ಮಾಡದೆ ಏಕೆ ಹೀಗೆ ಮಾಡಿದಿರಿ?" ಎಂದು ಮಕ್ಕಳನ್ನು ಆತ ಪ್ರಶ್ನಿಸುತ್ತಾನೆ. 

ಅವರ‌ ಉತ್ತರ ಅವನಿಗೆ ಮತ್ತಷ್ಟು ಆಶ್ಚರ್ಯ ಮತ್ತು ಅವರ ಬಗ್ಗೆ ಅಭಿಮಾನವನ್ನುಂಟು ಮಾಡುತ್ತದೆ. "ನಮ್ಮ ಜೊತೆಗಾರರಲ್ಲಿ ಎಲ್ಲರೂ ದುಃಖಿತರಾಗಿರುವಾಗ ಒಬ್ಬರು ಮಾತ್ರ ಹೇಗೆ ಸಂತೋಷವಾಗಿ ಹಣ್ಣುಗಳನ್ನು ತಿನ್ನುವುದು?" ಅವರ ನಾಗರೀಕತೆಯಲ್ಲಿ ಉಬುಂಟು (Ubuntu) ಎಂಬ ಮಾತಿದೆ. ಅದರರ್ಥ "ನಾನು ಇರುವುದು ನಾವುಗಳಿಂದ" (I am because we are)

ತಮ್ಮನ್ನು ತಾವು ಸುಸಂಸ್ಕೃತ ಸಮಾಜವೆಂದು ತಿಳಿದಿರುವ ಬಹಳಷ್ಟು ಸಮಾಜಗಳಲ್ಲಿ ಇಂದು ಮರೆಯಾಗುತ್ತಿರುವ ಸಂತೋಷದ ರಹಸ್ಯ ಆ ಬುಡಕಟ್ಟು ಜನರಿಗೆ ಚೆನ್ನಾಗಿ ತಿಳಿದಿದೆ.

(ಆಫ್ರಿಕನ್ ಕಥೆಗಳ ಪುಸ್ತಕವೊಂದರ ಆಧಾರ)

-ಹಾ ಮ ಸತೀಶ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ