ಒಂದು ಒಳ್ಳೆಯ ನುಡಿ - 268

ಒಂದು ಒಳ್ಳೆಯ ನುಡಿ - 268

* ಸುಳ್ಳರೆದುರು ಸತ್ಯ ಮುಚ್ಚಿಡಲು ಸತ್ಯವಂತರು ಕಡಿಮೆ ಮಾತನಾಡುತ್ತಾರೆ ;ಸುಳ್ಳನ್ನು ಸಾಧಿಸಲು ಸುಳ್ಳರು ಜಾಸ್ತಿ ಮಾತನಾಡುತ್ತಾರೆ !

* ಹಸಿವು , ಮನುಷ್ಯನನ್ನು ಒಂದೋ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ! ಇಲ್ಲ ಪಾತಾಳಕ್ಕೆ ತಳ್ಳುತ್ತದೆ ! 

* ಬದುಕಿನಲ್ಲಿ ನಲಿವನ್ನು ಸೆಳೆಯಿರಿ , ಅದು ನಿಮಲ್ಲಿರುವ ನೋವನ್ನು ಅಳಿಸುತ್ತದೆ ! 

* ಯಾವುದೇ ಸಂಸ್ಥೆಯಲ್ಲಿ , ಸೇವೆಯ ಹಿರಿತನವುಳ್ಳ ಕೆಲಸಗಾರರ ಜೊತೆಗೆ ವಯಸ್ಸಿನಲ್ಲಿ ಹಿರಿಯನಾದರೂ ; ಕಿರಿಯರಂತೆ ಜೊತೆಗೂಡಿಕೊಂಡು ಕೆಲಸ ಮಾಡಿ. ಯಾಕೆಂದರೆ, ಸಂಸ್ಥೆಯ ಬೆಳವಣಿಗೆ ದೃಷ್ಠಿಯೊಂದಿಗೆ, ನಿಮ್ಮ ವರ್ಚಸ್ಸು ದಿನಗಳೆದಂತೆ ಬೆಳೆಯುತ್ತದೆ ! 

* ದ್ವೇಷ ಅಸೂಯೆಗಳ ಗೂಡು ! ನಮ್ಮ ತಾಯಿಯ ನಾಡು ! ಅದಕ್ಕೆಂದು ತೋರುತ್ತದೆ ದಿನಕ್ಕೊಂದು ವೀರಪ್ಪನ್ ಅವತಾರ ನೋಡು !

* ನಾನು ಕಂದಡಿಗ ! ಉಟ್ಟು ಓರಾಟಗಾರ ! ನನ್ನ ಮಗ ಇಂಬ್ಲೀಸ್ ಎ ಬಿ ಸಿ ಡಿ ಮಾಯ್ಪು ಸೂಡಿ !  ನೋಡಿ ? ಅವನ ಮಗನೇ ಯು ಕೇ ಜಿ ಕಲಿತೀಗ ಎಲ್ ಕೆ ಜಿ ? ಕೊನೆ ಕೊನೆಗೆ ಈ ಕನ್ನಡ ನಾಡಿನ ಕನ್ನಡ ಇಂಗ್ಲೀಚ್ ಮಯದಲ್ಲಿ ಲೀ ಕೇಜ್ ಲೀ ಕೇಜ್ , ಕೇ ಜಿ ಕೇ ಜಿ ! 

* ಮೊನ್ನೆ ಮೊನ್ನೆಯವರೆಗೂ ಬೇಡ ಬೇಡವೆಂದರೂ ತುಪ್ಪದಲ್ಲೆ ಅದ್ದಿ ಅದ್ದಿ ದೋಸೆ ತಿನ್ನುತ್ತಲಿದ್ದೆ ! ಇಂದು ಹಾಗಲ್ಲ ? ದೋಸೆಯೂ ಇಲ್ಲ , ತುಪ್ಪ ಮೊದಲೇ ಇಲ್ಲ ! ಕಾರಣ ? ನಮ್ಮ ಮನೆಯ ಧನ ಮತ್ತು ದನ ಎರಡೂ ಕಾಣೆ ! ಆಗಿದೆ.

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ