ಒಂದು ಒಳ್ಳೆಯ ನುಡಿ - 270
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು,ಎಲ್ಲರಿಗೂ ಒಳ್ಳೆಯದಾಗಲಿ
ಕಸ್ತೂರಿ ತಿಲಕಂ ಲಲಾಟಫಲಕೇ ವಕ್ಷ: ಸ್ಥಲೇ ಕೌಸ್ತುಭಂ/
ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಂ/
ಸರ್ವಾಂಗೇ ಹರಿ ಚಂದನಂ ಕುಲಯಂ ಕಂಠೇಚ ಮುಕ್ತಾವಳೀ/
ಗೋಪಸ್ತ್ರೀ ಪರಿವೇಷ್ಟಿತೋ ವಿಜಯತೇ ಗೋಪಾಲಚೂಡಾಮಣಿ://
ವಸುದೇವಸುತಂ ದೇವಂ ಕಂಸಚಾಣೂರಮರ್ದನಂ/
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್//
ಕಪಟ ನಾಟಕರಂಗ ಸೂತ್ರಧಾರಿ, ನಿಸ್ಸೀಮ ರಾಜಕಾರಿಣಿ, ದುಷ್ಟರ ಸದೆಬಡಿದ ಅಸುರಾರಿ, ಶಿಷ್ಟರ ಕೈಹಿಡಿದು ಪೊರೆವ ಮುರಾರಿ, ಭಗವದ್ಗೀತೆ ಎನುವ ಮುತ್ತುರತ್ನದ ಮೂಲಕ ಜೀವನ ಸಂದೇಶವನ್ನು ಜಗಕೆ ಸಾರಿದ ಮಧುಸೂದನ, ಗೆಳೆಯ ಸುಧಾಮನ ಮೂಲಕ ಹೃದಯ ಶ್ರೀಮಂತಿಕೆ ಮೆರೆಸಿದ ದೇವಕಿ ಕಂದ, ಚೈತನ್ಯದಾಯಕ, ಮಾನವ ಸಂಬಂಧಗಳ ಅರಿವನ್ನು ಮೂಡಿಸಿದ ಯದುಕುಲೋತ್ತಮನೇ ನಿನ್ನ ಕೃಪಾಕಟಾಕ್ಷ ಸದಾ ಇರಲಿ. ಹಣೆಬರಹವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ನಿನ್ನ ಮೂಲಕವೇ ನೀನು ತೋರಿಸಿಕೊಟ್ಟ ಮಹಾತ್ಮ.ಭೇದಭಾವ ತೋರದೆ ಎಲ್ಲರೊಂದಾಗಿರಿ, ಸಕಲ ಜೀವಕ್ಕೂ ಮಾರ್ಗದರ್ಶನ ನೀಡಿದ ಗುರಿಕಾರನಾಗಿ ಮೆರೆದ ಹರಿಕಾರ. 'ಕರ್ಮ ಮಾಡು ಫಲ ಬಯಸದಿರು, ಅದು ಅವರವರ ಯೋಗ್ಯತೆಗನುಸಾರವೆಂದ 'ಜಗನ್ನಾಟಕ. ಸಮಸ್ತರ ಮೇಲೂ ದಯೆ ತೋರಿದ ಮಹಾನುಭಾವನೇ ಎಲ್ಲರಿಗೂ ಒಳ್ಳೆಯದನ್ನೇ ದಯಪಾಲಿಸಿ ರಕ್ಷಿಸು.
ಶ್ಲೋಕ ಕೃಪೆ : ನಿತ್ಯ ಸ್ತೋತ್ರಮಾಲಾ
-ರತ್ನಾ ಕೆ ಭಟ್, ತಲಂಜೇರಿ