ಒಂದು ಒಳ್ಳೆಯ ನುಡಿ - 272
ಬಂಧುಗಳಿಗೆಲ್ಲ 'ವಿಜಯದಶಮಿ' ಹಬ್ಬದ ಶುಭಾಶಯಗಳು.
ಶಮೀ ಶಮಯತೆ ಪಾಪಂ
ಶಮೀ ಶತ್ರು ನಿವಾರಣಂ/
ಅರ್ಜುನಸ್ಯ ಧನುರ್ಧಾರಿ
ರಾಮಸ್ಯ ಪ್ರಿಯದರ್ಶನಮ್//
ಅರಿಷಡ್ವರ್ಗಗಳು ದೇಹದಲ್ಲಿ ಸೇರಿಕೊಂಡು ಮಿತಿಮೀರಿ ವರ್ತಿಸಿದಾಗ, ಅದನ್ನು ನಾಶ ಮಾಡಿದ ಸಂಕೇತವೇ ವಿಜಯ. ದುಷ್ಟರ ಅಟ್ಟಹಾಸವನ್ನು ಮಟ್ಟ ಹಾಕಿ ವಿಜಯ ಸಾಧಿಸಿದ ದಿನವೇ ವಿಜಯದಶಮಿ. ಕೆಟ್ಟ ಕಳೆಯ ಕಿತ್ತೆಸೆಯಲು ಆದಿಶಕ್ತಿ ದುರ್ಗೆ ನವರೂಪಗಳನ್ನು ತಾಳಿ ಖೂಳ ಖಳನ ಹನನಗೈಯ್ದು,ಲೋಕಕ್ಕೆ ನೆಮ್ಮದಿ ಕರುಣಿಸಿದ ವಿಜಯದ ದಿನವಿಂದು. ತಾಯಿ ಚಾಮುಂಡಿಯು ಅನುಗ್ರಹಿಸಿದ ದಿನ.ಕಾಮನೆಗಳನ್ನು ಗೆದ್ದು ವಿಜೃಂಭಿಸಿದ ಈ ಆಚರಣೆಯೇ ವಿಜಯದಶಮಿ. ಮೈಸೂರಿನಲ್ಲಿ ತಾಯಿ ಚಾಮುಂಡಿಯನ್ನು ಹೊತ್ತ ಜಂಬೂಸವಾರಿ, ಮೆರವಣಿಗೆ, ಬನ್ನಿಪೂಜೆ ಇನ್ನಿತರ ಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಡುತ್ತದೆ. ಮನೆಮನಕಾವರಿಸಿದ ಕತ್ತಲನ್ನು ಕಳೆದು, ಬೆಳಕಿನತ್ತ ಸಾಗೋಣ. ತಾಯಿ ಶ್ರೀದುರ್ಗೆಯ ಕೃಪಾಕಟಾಕ್ಷ ಸದಾ ಇರಲೆಂದು ಪ್ರಾರ್ಥಿಸಿಕೊಳ್ಳೋಣ.
ಜಯಂ ದೇವಿ ಚಾಮುಂಡಿ ಸರ್ವಭೂತಾಪಹಾರಿಣಿ
ಜಯಸರ್ವಗತೇ ದೇವಿ ಭದ್ರಕಾಳಿ ನಮೋಸ್ತುತೇ/
ಶ್ರೀ ಚಾಮುಂಡಾ ಸಕಲಭುವನಾಧೀಶ ರಕ್ಷಾಧುರೀಣಾ
ವಿಷ್ಣುಬ್ರಹ್ಮಾದ್ಯ ಮರನಿಕರಸ್ತೂಯಮಾನಾಂಘ್ರಿಪದ್ಮಾ/
ಲಕ್ಷ್ಮೀವಾಣೀಕಲಿತ ವಿಭವಾ ಭದ್ರಕಾಳೀ ಸ್ವರೂಪ
ಭಕ್ತಾಭೀಷ್ಟಪ್ರಕರಕಲನಾ ಕಲ್ಪವಲ್ಲೀಂ ನಮಾಮಿ//
ಓಂ ಶ್ರೀ ಚಾಮುಂಡಿ ದೇವಿಯೇ ನಮ:
ಸಂಗ್ರಹ: ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ