ಒಂದು ಒಳ್ಳೆಯ ನುಡಿ - 79

ಒಂದು ಒಳ್ಳೆಯ ನುಡಿ - 79

ನಾವು ಎಲ್ಲರಲ್ಲಿಯೂ ಮಾತನಾಡುವುದು ಸಾಮಾನ್ಯ ಸಂಗತಿ. ಈ ಮಾತಿನಲ್ಲೂ ಒಂದು ಕಲೆ ಇದೆ. ಅರ್ಥಾರ್ಥ ಸಂಬಂಧವಿಲ್ಲದೆ ಮಾತನಾಡಿದರೆ, ಬೆನ್ನು ತಿರುಗಿಸಿದಾಗ ನಮ್ಮ ಬಗ್ಗೆ ಏನು ಹೇಳಿಯಾರು ಎಂಬ ಪ್ರಜ್ಞೆ ಬೇಕು. ‘ಮಾತಿನಲಿ ತೂಕವಿರೆ ಚಂದ’  

*ಅವ್ಯಾಹೃತಂ ವ್ಯಾಹೃತಾಚ್ಛ್ರೇಯ ಆಹುಃ*

*ಸತ್ಯಂ ವದೇದ್ವ್ಯಾಹೃತಂ* *ತದ್ದ್ವಿತೀಯಮ್|*

*ಪ್ರಿಯಂ ವದೇದ್ವ್ಯಾಹೃತಂ* *ತತ್ತ್ವತೀಯಂ*

*ಧರ್ಮಂ ವದೇದ್ವ್ಯಾಹೃತಂ*

*ತಚ್ಚತುರ್ಥಮ್||*

ನಾವು ಮಾತನಾಡುವ ಮಾತಿಗೆ ಬೆಲೆ ಇಲ್ಲವೆಂದಾದರೆ ಅಂಥ ಕಡೆ ಮೌನವಾಗಿರುವುದು ಲೇಸು. ಸತ್ಯವಾದ ಮತ್ತು ಪ್ರಿಯವಾದ ನುಡಿಗಳನ್ನೇ ಆಡುವುದು ಶ್ರೇಯಸ್ಕರ.ಸತ್ಯ, ಪ್ರಿಯ, ಧರ್ಮ ಸಮ್ಮತವಾದುದನ್ನೇ ಮಾತನಾಡುವುದು ಉತ್ತಮ .

ಒಟ್ಟಾರೆ ಬಾಯಿಯಲ್ಲಿ ಬಂದದ್ದೆಲ್ಲ ಮಾತಾಗಲು ಸಾಧ್ಯವಿಲ್ಲ. ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದಲ್ಲಿ ,ಅವರಾಡುವ ಮಾತುಗಳೂ ಸಂಸ್ಕಾರದಿಂದ ಕೂಡಿರಬಹುದು. ಮಾತು ನಮ್ಮನ್ನು ಹತ್ತಿರಕ್ಕೆ ಬೆಸೆಯಬಹುದು ದೂರಕ್ಕೆ ಒಯ್ಯಬಹುದು. ನಮ್ಮೆದುರು ನಿಂತವರು ಯಾರು, ಏನು, ಎಷ್ಟು, ಹೇಗೆ? ಎಂಬುದನರಿತು ಮಾತನಾಡೋಣ ಆಗದೇ?

-ರತ್ನಾ ಭಟ್, ತಲಂಜೇರಿ

 (ಶ್ಲೋಕ-ಆಕರ-ಮಹಾಭಾರತ)