ಒಂದು ಒಳ್ಳೆಯ ನುಡಿ - 83

ಒಂದು ಒಳ್ಳೆಯ ನುಡಿ - 83

ಅಂತರಂಗದ ಪುಸ್ತಕವನ್ನು ಮಡಚಿಟ್ಟು ಮಾಡುವ ಯಾವುದೇ ವ್ಯವಹಾರ ಫಲಪ್ರದವಾಗದು. ನಾವು ಎಷ್ಟೇ ಉತ್ತಮ ಆಲೋಚನೆಗಳನ್ನು, ಯೋಜನೆಗಳನ್ನು ಹಾಕಿಕೊಂಡರು ಅದೆಲ್ಲ ತೋರಿಕೆಯ ನಾಟಕವಾಗಬಹುದು. ಮನಸ್ಸನ್ನು ಬಿಚ್ಚಿ ಕೈಗೊಂಡ ಯಾವುದೇ ಕೆಲಸಕ್ಕೆ ಭಗವಂತನ ಆಶೀರ್ವಾದ ಇದೆ ಖಂಡಿತ. ಒಮ್ಮೆಗೆ ನಾಲ್ಕು ಜನ ಮೆಚ್ಚುವ ಕೆಲಸ ನಮಗೆ ಬೇಡ. ಶಾಶ್ವತತೆ ಇರುವಂತೆ ನೋಡಿಕೊಳ್ಳಬೇಕಾದ್ದು ಅವಶ್ಯ. ಅವರಿವರ ದುಡಿಮೆಯ ಫಲ ನಮಗ್ಯಾಕೆ? ಪರರ ಹೊಟ್ಟೆಯ ಅನ್ನ ಕಿತ್ತುಕೊಳ್ಳುವುದು, ಅವರ ಶ್ರಮವ ನಾವು  ಬಯಸುವುದು ತಪ್ಪು. ನಾವು ದುಡಿದು ನಾವು ಉಣ್ಣಬೇಕು, ಅದರಲ್ಲಿ ಅಲ್ಲವೇ ಸಂತೋಷ, ಸುಖ, ನೆಮ್ಮದಿ, ತೃಪ್ತಿ. ಯಾವ ಕೆಲಸ ಕೈಗೊಂಡರೂ ಮನಸ್ಸಿಟ್ಟು ಮಾಡಿ ಫಲ ಪಡೆಯೋಣ, ತೋರಿಕೆಯ ನಟನೆ ಬೇಡ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ