ಒಂದು ಗಝಲ್

ಒಂದು ಗಝಲ್

ಕವನ

ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ

ಚೆಲುವಿನ ಅಪ್ಪುಗೆಯಲ್ಲಿಯೆ ನರಳಿಬಿಡೆ ನನ್ನವಳೆ

 

ಬೆಸುಗೆಯ ಬಂಧನದಲ್ಲಿಯೆ ಪ್ರೀತಿಯಿಲ್ಲವೆಂದೆ ಏಕೆ

ಹಿತವಾಗಿಯೇ ಬಿಗಿದಿರುವೆನು ಕೆರಳಿಬಿಡೆ ನನ್ನವಳೆ

 

ತಂಪು ಹನಿಸುವ ಚಂದ್ರನಿನ್ನೂ ಮುಳುಗಿಲ್ಲ ನೋಡು

ಹಾಸಿಗೆಯ ತುಂಬೆಲ್ಲ ಹೀಗೆ ಹೊರಳಿಬಿಡೆ ನನ್ನವಳೆ

 

ಆಲಿಂಗನ ಚೆನ್ನಾಟ ಕುಡಿನೋಟದ ಪ್ರೇಮದೊಸಗೆ

ಮುತ್ತುಗಳ ಮತ್ತಿನಲ್ಲಿಯೇ ಮೊರಳಿಬಿಡೆ ನನ್ನವಳೆ

 

ಕೈಹಿಡಿದ ಚೆಲುವನೀಗ ಬಿಡುವನೇನು ಹೇಳು ಈಶಾ

ಹಗಲು ಕಳೆದು ರಾತ್ರಿಗಿಂದು ಮರಳಿಬಿಡೆ ನನ್ನವಳೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್