ಒಂದು ಗಝಲ್
ಕವನ
ಮನದ ಅರಸಿಯೆ ನಿನಗೆ ಹೊಗಳಿಕೆ ಬೇಕೆ
ಒಡಕು ಕೆಡುಕುಗಳಿರದೆ ಬರೀ ತೆಗಳಿಕೆ ಬೇಕೆ
ಸುಳ್ಳು ಮಾತಲಿ ಸಾಗಲು ಖಚಿತ ಸೋಲಲ್ಲವೆ
ಭಾಷೆಯನರೆದು ಸಾಗುವಗೆ ಹೀಯಾಳಿಕೆ ಬೇಕೆ
ಮೌಲ್ಯದಾ ಜೀವನವು ದಿಕ್ಕುಗಳನೆ ಬದಲಿಸಿತು
ಪಂಡಿತನೆಂದವಗೇ ಮತ್ತೆಂದೂ ತಿಳುವಳಿಕೆ ಬೇಕೆ
ತಾಯ ಒಲುಮೆಲಿ ಮಗುವು ಬೆಳೆಯುತ್ತಾ ಬಂದಿದೆ
ಮನುಷ್ಯನ ಬಾಳಿಕೆಗೆ ಮತ್ತೊಮ್ಮೆ ಮುಚ್ಚಳಿಕೆ ಬೇಕೆ
ಸೌಮ್ಯ ವಾದದ ನಡುವೆ ನೋವು ಬರದಿರಲಿ ಈಶಾ
ಪ್ರತೀ ಮಾತಿಗೊಮ್ಮೊಮ್ಮೆ ಹೀಗೆಯೆ ಹೊರಳಿಕೆ ಬೇಕೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
