ಒಂದು ಗಝಲ್
ಕವನ
ಎದುರುತ್ತರವ ಕೊಡುವವರ ಹತ್ತಿರವೆಂದೂ ಮೌನವಾಗಿರು ಗೆಳೆಯ
ಅರ್ಥವೇ ಆಗದವರಿಂದ ನೀನಿಂದು ತುಂಬಾ ದೂರವಾಗಿರು ಗೆಳೆಯ
ಅತಿಯಾದ ತಿಳುವಳಿಕೆಯೂ ಕೆಲವೊಮ್ಮೆ ಹೀಗೆಯೇ ನೋವಲ್ಲವೇನು
ಕವಿಭಾವದೊಳಿಂದು ಹೊಂದಾಣಿಕೆಯ ಕೊರತೆ ಹುತ್ತವಾಗಿರು ಗೆಳೆಯ
ಸರ್ವಜ್ಞನ ಹತ್ತಿರಕ್ಕೂ ಬಾರದವರಿಂದು ಬಹುತೇಕ ತಿಳಿದವರೆನ್ನುತ್ತಿದ್ದಾರೆ
ಹಲ್ಲು ಉದುರಿದರೆ ಪಂಡಿತರಯ್ಯ ನಡುವೆಯೇ ಮೆತ್ತಗಾಗಿರು ಗೆಳೆಯ
ಬರಹಗಾರರ ಜೊತೆಯೇ ಇರುತ್ತಾ ನಿನ್ನಲಿಹ ಶೈಲಿಯಲ್ಲೇ ಧ್ಯಾನಸ್ಥನಾಗು
ಬಿರುಸಾದ ವಾದಗಳ ಮಾಡುವ ಬದಲು ಓದಿನಲ್ಲಿ ಮಗ್ನನಾಗಿರು ಗೆಳೆಯ
ಮಾತುಗಳಿಗೆಂದೂ ಕಿವಿಗೊಡದೆ ಗೊತ್ತಿರುವುದನ್ನು ಬರೆಯುತ್ತಿರು ಈಶಾ
ಟೀಕೆಗಳು ನಮ್ಮೊಳಗಿನ ಬರಹಗಳಿಗೆ ಜೇನೆನ್ನುತ್ತಾ ಖುಷಿಯಾಗಿರು ಗೆಳೆಯ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
