ಒಂದು ಗಝಲ್

ಒಂದು ಗಝಲ್

ಕವನ

ನಾನು ಇರುವಲ್ಲಿಗೇ ನೀನು ಹಾರಿ ಬಿಡು

ನನಗೆ ಸಮಸ್ಯೆಯೆ ಆಗದಂತೆ ಕೇಳಿ ಬಿಡು

 

ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು

ನಿನಗೆ ಗೊತ್ತಿರುವಂತೇ ನನ್ನನಿಂದು ದಾಟಿ ಬಿಡು

 

ನಾನು ಗತಿಯು ಇಲ್ಲದವನೆಂದೇ ಕರೆದೆಯೇನು

ನನಗೆ ಬದಲಾಗಲಾರದವನೆಂದು ಕಾಡಿ ಬಿಡು

 

ನೀನು ಹೆಸರಾದರೆ ಒಲವ ತರುವೆಯೇನು

ನಿನಗೆ ಬಯಸಿದ್ದೆಲ್ಲ ಸಿಕ್ಕಿದರೆ ತೇಲಿ ಬಿಡು

 

ನಾನು ಮೌನವಾದರೆ ಕನಸಲ್ಲಿ ಸರಿಯದಿರು

ನನಗೆ ಈಶನಿಂದು ಎದುರಾದರೆ ಬಾಗಿ ಬಿಡು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್