ಒಂದು ಗಝಲ್

ಒಂದು ಗಝಲ್

ಕವನ

ನೀನಿಲ್ಲದೆ ಛಲವು ಬರುವುದೆ ಗೆಳತಿ

ನಾನಿಲ್ಲದೆ ಮನವು ಗೆಲುವುದೆ ಗೆಳತಿ

 

ಸ್ಥಳವಿಲ್ಲದೆ ಯಾನವು ಸಾಗುವುದೆ ಗೆಳತಿ

ಬುಡವಿಲ್ಲದೆ ಮರವು ಉಳಿವುದೆ ಗೆಳತಿ

 

ಗುಣವಿಲ್ಲದೆ ತನುವು ಇರುವುದೆ ಗೆಳತಿ

ಮಧುವಿಲ್ಲದೆ ಜೀವವು ಸೇರುವುದೆ ಗೆಳತಿ

 

ಜೀವವಿಲ್ಲದೆ ಪಂಥವು ಮೆರೆವುದೆ ಗೆಳತಿ

ಸವಿಯಿಲ್ಲದೆ ಒಲವು ಮೂಡುವುದೆ ಗೆಳತಿ

 

ಈಶನಿಲ್ಲದೆ ಭಯವು ಕಾಣುವುದೆ ಗೆಳತಿ

ಕನಸಿಲ್ಲದೆ ಚೈತ್ರವು ತಬ್ಬುವುದೆ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್