ಒಂದು ಗಝಲ್
ಕವನ
ಬೆಂದಿರುತ ನೋವಿನಲಿ ನಡೆದವರ ನೋಡು
ನೊಂದಿರುತ ಕಣ್ಣೀರ ಸುರಿಸಿದವರ ನೋಡು
ಸಮಾನ ತತ್ವಗಳು ಇಲ್ಲದ ಘೋಷಣೆಗಳು ಯಾಕೆ
ನಡೆಯುವಾಗ ಚಪ್ಪಲಿಯೇ ಹಾಕದವರ ನೋಡು
ಏನು ಸರಿಯಿದೆಯೆಂದು ಈ ಬುವಿಗೆ ಬಂದೆಯೊ
ವರ್ಣಗಳ ಜೊತೆ ಜೊತೆಗೆ ಒದ್ದಾಡುವರ ನೋಡು
ಕಪಿ ವಂಶದವರೇ ಎಲ್ಲೆಲ್ಲೂ ಕಾಣುತಿಹರು ಏಕೆ
ಮತಿಗೆಟ್ಟ ಲೋಕದೊಳು ಹಾರಾಡುವರ ನೋಡು
ಸ್ವತಂತ್ರ ಭಾವನೆಗಳು ಸುತ್ತಲೂ ತುಂಬಿದೆ ಈಶಾ
ಬಡತನ ಬುವಿಗಿಂದು ಶಾಪ ಎನ್ನುವರ ನೋಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
