ಒಂದು ಗಝಲ್
ಕವನ
ಸತ್ವವೇ ಇಲ್ಲದಿಹ ಬರಹದಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ
ಬರಹದ ಮಹತ್ವವನ್ನು ಅರಿಯದೆ ಬರೆದ ಲೇಖನಗಳು ಬರುತ್ತವೆ
ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳು ಗಟ್ಟಿಯಾದಿತೆ
ಕಾರಣವಿಲ್ಲದೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ
ಮುಡಿಯೊಳಗೆ ಒಣಗಿದ ಗುಲಾಬಿಗಳು ಇರುವಂತೆ ಕವನಗಳು ಇರಬೇಕೆ
ಮಡಿಯವರ ಬಾಯಿಯೊಳಗಿನ ಚಪಲವ ಕಂಡಾಗ ರೋಷಗಳು ಬರುತ್ತವೆ
ಚಿಗುರೆಲೆಯಲ್ಲೂ ಹೊಸತನದ ಕಾವ್ಯಗಳ ಕಾಣಬಹುದು ಅನುಭವಿಸಿ ಬರೆಯು
ಗೊತ್ತಿಲ್ಲವೆನ್ನುವರ ನಡುವೆಯೇಯಿಂದು ದ್ವಿಮುಖವೆನಿಪ ವೇಷಗಳು ಬರುತ್ತವೆ
ಉಂಡಮನೆಗೆ ದ್ರೋಹಗಳನು ಬಗೆಯುವವರಿಗೆ ಏನೆನ್ನಲಿ ಈಶಾ
ಹಾಸಿಗೆಯೊಂದು ಇದ್ದಷ್ಟಕ್ಕೇ ಕಾಲುಚಾಚದಿರೆ ಕ್ಲೇಷಗಳು ಬರುತ್ತವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
