ಒಂದು ಗಝಲ್
ಕವನ
ಅಲ್ಲಲ್ಲಿ ಹೀಗೆಯೇ ನೀನು ಸುತ್ತಬೇಡ ಹೇಳುವವರು ಇಲ್ಲ
ಜಲ್ಲಿಗುದ್ದಿ ಬದುಕಿದರು ಯಾರೊಬ್ಬರೂ ಕೇಳುವವರು ಇಲ್ಲ
ಪರಿಸ್ಥಿತಿ ನೋಡಿ ಮಣೆಹಾಕುವವರು ಎಲ್ಲಿದ್ದರೇನು ಈಗ
ದುಡಿಮೆಯ ಕೈಯಿಂದು ಖಾಲಿಯೋ ಬರುವವರು ಇಲ್ಲ
ಸೋಲುವುದರ ನಡುವೆಯೇ ಬದುಕುವುದರ ಕಲಿಯುತಿರು
ಬಾಳಿನ ಒಳಗಿರುವ ಈ ಬುತ್ತಿಯೊಳಗೇ ಇರುವವರು ಇಲ್ಲ
ಉಪವಾಸ ಬಿಡಲೆಂದಿಗೂ ಹನಿನೀರದು ಇದ್ದರೆ ಸಾಕಲ್ಲವೆ
ವನವಾಸದ ಜೊತೆ ಜೊತೆಯಲ್ಲಿಯೇ ಹಾಡುವವರು ಇಲ್ಲ
ಈಗ ಮಾಡಿಟ್ಟರುವುದ ನಾನೊಬ್ಬನೇ ಉಣ್ಣಬೇಕು ಈಶ
ಇಷ್ಟವಿದ್ದರೂ ನನ್ನಯ ಆಡೊಂಬಲಕೆ ಸಿಗುವವರು ಇಲ್ಲ
-ಹಾ ಮ ಸತೀಶ ಬೆಂಗಳೂರು, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
