ಒಂದು ಗಝಲ್
ಕವನ
ನಮ್ಮ ಧಮ್ಮದ ಜೊತೆಗೆ ಉಳಿದವರ ಉಳಿಸುವ
ದಯೆ ಕರುಣೆ ಸಮಭಾವ ನಮ್ಮವರ ಉಳಿಸುವ
ಭಾರತದ ಆತ್ಮದೊಳು ಸೇರುತಲೆ ನಡೆಯೋಣ
ಭಾವ ಜ್ಯೋತಿಯ ಜೊತೆಗೆ ನಿಂತವರ ಉಳಿಸುವ
ಸಂಕಟದ ಸಮಯದೊಳು ಸೇವೆ ಗೈಯುವ ಸತತ
ಸತ್ಯ ಸ್ವೀಕಾರ ನಡೆಯೊಳಗೆ ಬಾಳುವರ ಉಳಿಸುವ
ತ್ಯಾಗ ಸೇವೆಯ ತಪಸ್ಸುಗಳು ನಮ್ಮಲಿರಲೀ ಜನರೆ
ಸಮಯದೊಳು ಸಮ ಪ್ರಜ್ಞೆ ಕಾಣುವರ ಉಳಿಸುವ
ಇನ್ನೊಬ್ಬರ ಹಿತವೆನಿಪ ಮನಕೆ ನಡೆಯುವನು ಈಶಾ
ಮಾನವೀಯ ಸೇವೆಯೊಳು ಬರುವವರ ಉಳಿಸುವ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
