ಒಂದು ಗಝಲ್

ಒಂದು ಗಝಲ್

ಕವನ

ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ

ಸೋಲು ಇದೆ, ಕೂಡಲಿಲ್ಲ  ನೋಡಿಯೇ ಇದ್ದ

 

ಬಾಳು ಕರಗದೇ, ಮತ್ಯಾಕೆ ನಡೆದು ಹೋದ

ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ

 

ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ

ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ

 

ನೂಲು ಹರಿಯಲಿಲ್ಲ, ಬಟ್ಟೆಗೆ ಸಿಟ್ಟದು ಬಾರದೆ

ಶಾಲು ಕೊಡಲಿಲ್ಲ ,ಹಾಗೆಂದು ಕಾಡಿಯೇ ಇದ್ದ

 

ಎಷ್ಟು ಹೊರಲಿಲ್ಲ ,ಸತ್ತವರು ಬರುವರೆ ಈಶಾ

ಕಷ್ಟ ಸಾಯಲಿಲ್ಲ ,ಬದುಕಲ್ಲಿ ಬಾಡಿಯೇ ಇದ್ದ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್