ಒಂದು ಗಝಲ್

ಒಂದು ಗಝಲ್

ಕವನ

ಪ್ರೀತಿಯುಸಿರಲಿ ನಿನ್ನನು ಸಲಹುತ್ತಲೇ ಬಂದಿರುವೆ ನಾನು 

ಎದೆಗೆ ಸುಡುವ ಬೆಂಕಿಯನ್ನು ಇಡದಿರು ಎಂದಿರುವೆ ನಾನು 

 

ಪ್ರೇಮ ಗೀತೆಯೊಂದೆ ಸಾಕು ಬಾಳಲಿ ನಲಿವ ಚೆಲುವು ಬೇಕೆ

ದಾರಿಯೆಂದೂ ತಪ್ಪದಿರಲು ದೂರಕ್ಕೆ ಹೋಗದಿರುವೆ ನಾನು

 

ಸಿಂಗಾರ  ಭಾವದ ಚಂದ್ರನ ಬೆಳಕಿಂದು ಸದಾ ಚೆಲ್ಲುತಿಹುದು

ದೌರ್ಜನ್ಯದ ವಿರಹವಿದ್ದರೂ ಸಿಡುಕಲಿ ಸಾಗದಿರುವೆ ನಾನು 

 

ಮನದೊಡತಿ ನೀನೆಂದೂ  ಕನಸಿನಲು ಹೇಳಿರುವೆ ನಾನಿಂದು

ಸ್ಪೂರ್ತಿಯೊಳು ಶೃಂಗಾರದ ನವರಸವನು ತುಂಬಿರುವೆ ನಾನು 

 

ಹುಣ್ಣಿಮೆ ತಾರೆಯ ಒಡನಾಟವು ಹೀಗೆಯೆ ತುಂಬಿರಲಿ ಈಶಾ

ಸರಸ ಸಲ್ಲಾಪದ ಕಲೆಗಿಂದು ಸವಿಯ ಜೇನಾಗಿರುವೆ ನಾನು 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್