ಒಮ್ಮೆ ಮನೆಗೆ ಬಂದುಬಿಡು.

ಒಮ್ಮೆ ಮನೆಗೆ ಬಂದುಬಿಡು.

ಬರಹ

ಅವಳು ನನ್ನ ಬಾಳಿಗೆ ಬಂದು ಇನ್ನೂ ಮೂರು ವರ್ಷವೂ ಆಗಿಲ್ಲ. ಆದರೆ ಬದುಕಿನ ಚೇತನವೇ ಅವಳಾಗಿದ್ದಾಳೆ.
ಅವಳ ಮುದ್ದು ಮುಖ ನೋಡದೆ ಎರೆಡು ದಿನ ಕಳೆದಿದೆ. ಅವಳ ಹೆಜ್ಜೆಯ ಸ್ಪರ್ಶಕ್ಕಾಗಿ ಮನೆಯ ನೆಲ ಹಾತೊರೆಯುತ್ತಿದೆ ತಣ್ಣಗೆ ಕೊರೆಯುತ್ತಿದೆ . ಅವಳೇಕೆ ತನ್ನನ್ನು ಗೀಚಲಿಲ್ಲ ಎಂದು ಗೋಡೆ ಬಣ್ಣ ಕಳೆದುಕೊಂಡಿದೆ. ಅವಳ ಗೆಜ್ಜೆ ನಾದ ಕೇಳುತ್ತಿಲ್ಲ ಎಂದು ಆಟದ ಗಿಳಿಯ ಸೆಲ್ ಧ್ವನಿ ಮಂಕಾಗಿದೆ
ಅವಳು ತಮ್ಮನ್ನು ಮುದ್ದಾಡಲಿಲ್ಲ ಎಂದು ಮನೆಯ ಗೊಂಬೆಗಳೆಲ್ಲಾ ಮೂಲೆ ಸೇರಿವೆ
ಹೌದು ನನ್ನ ಕಂದ ಅಜ್ಜಿ ಮನೆಗೆ ಹೋಗಿ ಎರೆಡುದಿನಗಳಾಗಿವೆ
ಅಮ್ಮ ಯಾವಾಗಲೂ ಫೋನ್ ಮತ್ತೆ ಕಂಪ್ಯುಟರ್ ಜೊತೆ ಮಾತಾಡ್ತಾಳೆ ಎಂದು ಕೋಪಿಸಿಕೊಂಡಿದ್ದ್ದಾಳೆ ಅಷ್ಟೆ ಅಲ್ಲಾ ಮನೆಗೆ ಬಾ ಯಶು ಎಂದರೆ ಬರುವುದಿಲ್ಲ ಎನ್ನುತ್ತಾಳೆ. ಅಜ್ಜಿಯ ಮನೆಯೇ ಅವಳಿಗೆ ಖುಷಿ.
ಅವಳನ್ನು ನನ್ನತ್ತ ಸೆಳೆದುಕೊಳ್ಳುವುಲ್ಲಿ ನಾನೆಲ್ಲಿ ಎಡವಿದೆ ?. ಎದ್ದಾಗಲೊಮ್ಮೆ ಮಲಗುವ ಮುನ್ನ ಯಶಿತಾ ಎನ್ನುವ ಮಂತ್ರ ನನ್ನದು .
ಚೆಂದ ಚೆಂದದ ಬಟ್ಟೆ, ಬೇಕಾದ ತಿಂಡಿ, ನೋಡಿದ ಆಟಿಕೆ ಬೇಕೆಂದೊಡನೆ ಅವಳದಾಗುತ್ತದೆ. ಆದರೂ ನನ್ನ ಪ್ರೀತಿ ಏಕೆ ನನ್ನ ಕಂದನಿಗೆ ತಿಳಿಯಲಿಲ್ಲ?
ಅವಳಿಗಾಗಿ ನಾನೇನನ್ನು ಮಾಡಲಿಲ್ಲ ? ಅಥವ ಏನನ್ನೂ ಮಾಡಲಿಲ್ಲವೇ.

ನನ್ನ ಮೇಲೆಂಥ ಮುನಿಸು . ಇಲ್ಲಿರದ ಯಾವ ಸೆಳೆತ ಅವಳನ್ನು ಅಲ್ಲಿ ಎಳೆಯುತಿದೆ?

ನಾನೇನು ಮಾಡಿದರೂ ಅವಳಿಗಾಗಿ ಅಲ್ಲವೇ . ಅವಳ ಭವಿಷ್ದ್ಯದ ಸುಖಕ್ಕಾಗಿ ಅಲ್ಲವೇ ನಾವೀ ರೀತಿ ದುಡಿಯುತ್ತಿರುವುದು. ಅದು ಅವಳಿಗೆ ಹೇಗೆ ಅರ್ಥವಾಗುತ್ತದೆ ? ಅಥವ ಅವಳ ಆಸೆಯೇ ಬೇರೆಯೇ. ಅವಳ ಪುಟ್ಟ ಮನ್ಸದ ಆ ಪುಟ್ಟ ಆಸೆಯ ನನಗೇಕೆ ತಿಳಿಯಲಾಗುತ್ತಿಲ್ಲ

ಬಾ ಚಿನ್ನ ಬಾ ಒಮ್ಮೆ ಮನೆಗೆ ಬಂದು ಬಿಡು . ದಿನದ ಸಮಯವನ್ನೆಲ್ಲಾ ಅಲ್ಲದಿದ್ದರೂ ನಿನಗೆ ಬೇಕೆಂದಾಗಲೆಲ್ಲಾ ನಾ ನಿನ್ನೊಡನೆ ಕಳೆಯುವೆನು