ಒಲವಿನ ಆ ಪರಿ ...

ಒಲವಿನ ಆ ಪರಿ ...

ಕವನ

ಉಸಿರಲಿ ಅರಳಿದ ಒಲವಿನ ಆ ಪರಿ
ಭಾವದ ಮಿಂಚಲೂ ಒಲಿಯದ ಹೃದಯದ ಗಾಬರಿ
ಮುನಿಯದ ಹೂವಿಗೆ ಏನೆಂದು ನಾ ಶಪಿಸಲಿ
ಒಲುಮೆಗೆ ಮರುಗಲು ಇನ್ನೆಷ್ಟು ಕಾಲ ರಮಿಸಲಿ , ಭ್ರಮಿಸಲಿ ....

ಅರಿವಿಗೆ ಮೀರಿದ ನಿನ್ನಯ ಚೆಲುವು
ಕಾತರ ತೋರದೇ ಸೊರಗಿದ ಪ್ರೇಮಿಯ ಮರೆವು
ಎದೆಯಾಳದಿ ಹರಿದಾಡುವ ಸಂಗೀತದ ಸೊಬಗು
ಕಿವಿ ಸೇರುವ ಮೊದಲು ನೀ ಕಣ್ತುಂಬಿ ಹೋಗು ....

ನಿನ್ನೊಲುಮೆಯ ಸ್ಪಂದನದ ಬಂಧನ
ಅಭಿದಮನಿಯು ಚಿಮ್ಮಿದ ಕಂಪನದ ಆಲಿಂಗನ
ಮತ್ತದೇ ಸಿಂಗಾರ ಮನದ ಹಜಾರದಲಿ
ಯಾರಿಗೂ ಕಾಯದೇ ಬಂದು ಸೇರು ಇಂದಾದರೂ ಮನೆಯಂಗಳದಲಿ ....