ಒಲುಮೆ

ಒಲುಮೆ

ಕವನ

 

ಸೊಗದ ಚೆಲುವನೆ ನಿನ್ನ
ನಗುವ  ಮೊಗವನು ನೋಡೆ
ಹಲವು ಬಗೆಯಲಿ ಒಲವು
ಮೊಗೆವುದೆದೆಯಲಿ ಏಕೆ
ಚಿಲುಮೆಯಂತೆ?!
 
ಮುದದಿ ನೆನೆಯಲು ನಿನ್ನ
ಮೃದು ಹೃದಯದಲಿ ಇಂದು
ಧಗ ಧಗಿಸುತ ಒಲವು
ಬಿಡದೆ ಜ್ವಲಿಸುತಿಹುದೇಕೆ
ತಿದಿ ಒತ್ತಿದಾ ಆ 
ಕುಲುಮೆಯಂತೆ?! 
-ಮಾಲು