ಒಳ್ಳೆಯ ಅಭಿನಯ ಶಿವಕುಮಾರಾರಾಧ್ಯರದು- ರಘೋತ್ತಮ್ ಕೊಪ್ಪರ
ಒಳ್ಳೆಯ ಅಭಿನಯ ಶಿವಕುಮಾರಾರಾಧ್ಯರದು- ರಘೋತ್ತಮ್ ಕೊಪ್ಪರ
ಕಿರುತೆರೆ, ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರೊಬ್ಬರ ಬದುಕಿನ ಬಗ್ಗೆ ಬರೆಯಬೇಕೆನಿಸಿತು. ಆಗ ನನಗೆ ನೆನಪಿಗೆ ಬಂದದ್ದು ನನ್ನ ಹಿತೈಷಿ ಮತ್ತು ಕಲಾಧಾರಕರಾದ ಶಿವಕುಮಾರಾರಾಧ್ಯ. ಮೈಸೂರು ರಮಾನಂದರ ಗೆಜ್ಜೆ ಹೆಜ್ಜೆ ಮಾಸ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ರಂಗ ದಿಗ್ಗಜರ ಬಗ್ಗೆ ನಾ ಬರೆಯುವ ಅಂಕಣದಲ್ಲಿ ಈ ಸಾರಿ ಶಿವಕುಮಾರಾರಾಧ್ಯರ ಬಗ್ಗೆ ಬರೆಯುತ್ತಿದ್ದೇನೆ. ಆಗ ಇದನ್ನು
ನನ್ನ ನೆಚ್ಚಿನ ಸಂಪದದಲ್ಲಿಯೂ ಯಾಕೆ ಬರೆಯಬಾರದು ಅನ್ನಿಸಿತು.
ಇವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ. ಓದಿದ್ದು ಡಿಪ್ಲೋಮಾ ಸಿವಿಲ್ ಇಂಜನೀಯರಿಂಗ್. ಉದ್ಯೋಗ ದೊರೆತದ್ದು ಯಲಹಂಕದಲ್ಲಿರುವ ಎಸ್ಕಾರ್ಟ್ಸ್ ಕಾರ್ಖಾನೆಯಲ್ಲಿ. ಚಿಕ್ಕಂದಿನಿಂದಲೂ ರಂಗಭೂಮಿಯತ್ತಿದ್ದ ಇವರ ಒಲವು ಕಿರುತೆರೆ ಮತ್ತು ಬೆಳ್ಳಿತೆರೆಗೂ ಚಾಚಿತು. ಆಮೇಲೆ ಉದ್ಯೋಗವನ್ನು ಬಿಟ್ಟು ಅಂದರೆ ವಿ.ಆರ್.ಎಸ್. ಪಡೆದು ಅಭಿನಯವನ್ನೆ ಫುಲ್ ಟೈಂ ಜಾಬ್ ಆಗಿ ಮಾಡಿಕೊಂಡರು. ನಂತರ ಕಿರುತೆರೆಯಲ್ಲಿ ೫೦೦೦ಕ್ಕೂ ಹೆಚ್ಚೂ ಸರಣಿಗಳಲ್ಲಿ ಅಭಿನಯಿಸಿದರು.
ಈಗ ಪ್ರಸಾರವಾಗುತ್ತಿರುವ ಧಾರವಾಹಿಗಳು: ಮುತ್ತಿನ ತೆನೆ, ತಕಧಿಮಿತಾ, ಅಕ್ಕ, ನಾಕುತಂತಿ, ಪರಮೇಶಿ ಪರದಾಟ, ಪಾಂಡು ಐ ಲವ್ ಯೂ, ಡಿಟೆಕ್ಟಿವ್ ಧನುಷ್, ಕುಸುಮಾಂಜಲಿ ಮುಂತಾದುವು. ಇಲ್ಲಿಯ ವರೆಗೆ ಸುಮಾರು ೫೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಅತ್ಯುತ್ತಮ ನಿರ್ದೇಶಕರೆಲ್ಲರ ಜತೆಗೆ ಕೆಲಸ ಮಾಡಿದ್ದು ಖುಷಿ ತಂದು ಕೊಟ್ಟಿದೆ ಎನ್ನುತ್ತಾರೆ ಆರಾಧ್ಯರು.
ಇಷ್ಟೆಲ್ಲ ಬ್ಯುಸಿಯಾಗಿದ್ದರೂ ವಂಶ ಪಾರಂಪರಿಕವಾಗಿ ಬಂದಿರುವ ಪೌರೋಹಿತ್ಯವನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ. ಕಾವೇರಿ ಧಾರವಾಹಿಯಲ್ಲಿ ಪೊಲೀಸ್ ಆಗಿ ಮತ್ತು ವಠಾರ ಧಾರವಾಹಿಯಲ್ಲಿ ನಕ್ಕಿರನ್ ಗೋಪಾಲ್ ಆಗಿ ವೀಕ್ಷಕರ ಮನದಲ್ಲಿ ನೆಲೆಸಿದ್ದಾರೆ. ಇವರ ಫೋನ್ ನಂಬರ್ ಬೇಕೆ: ೯೯೬೪೪ ೪೩೦೨೧.