ಒಳ್ಳೆಯ ಸುಭಾಷಿತಗಳು- ೧೩-೧೫
೧೩. ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು |
ಲಕ್ಷ್ಮೀ ಸಮಾವಿಶತು ಗಚ್ಛತು ವಾ ಯಥೇಷ್ಟಂ ||
ಅದೈವ ವಾ ಮರಣಮಸ್ತು ಯುಗಾಂತರೇ ವಾ |
ನ್ಯಾಯಾತ್ ಪಥ: ಪ್ರವಿಚಲಂತಿ ಪದಂ ನ ಧೀರ್ಆ: ||
ನೀತಿಶಾಸ್ತ್ರ ಬಲ್ಲವರು ತೆಗಳಲಿ ಅಥವಾ ಹೊಗಳಲಿ , ಸಂಪತ್ತು ಬರಲಿ ಅಥವಾ ಹೋಗಲಿ , ಮರಣವು ಈಗಲೇ ಬರಲಿ ಅಥವಾ ಯುಗಗಳ ನಂತರ ಬರಲಿ , ಧೀರರು ನ್ಯಾಯದ ದಾರಿಯಿಂದ ಸ್ವಲ್ಪವೂ ವಿಚಲಿತರಾಗುವದಿಲ್ಲ .
೧೪. ಪ್ರಿಯನ್ಯಾಯಾವೃತ್ತಿರ್ಮಲಿನಮಸುಭಂಗೇಪ್ಯಸುಕರಂ |
ಮತ್ವಂ ಸತೋನಾಭ್ಯರ್ಥಾ: ಸುಹೃದಪಿ ನಯಾಚ್ಯ: ಕೃಶಧನ:||
ವಿಪದ್ಯುಚ್ಚೈ: ಸ್ಥೇಯಂ ಪದಮನುವಿಧೇಯಂ ಚ ಮಹತಾ
ಸತಂ ಕೇನೋದ್ದಿಷ್ಟಂ ವಿಷಯಂ ಅಸಿಧಾರಾವೃತಮ್ ||
ಸಜ್ಜನರು ಶ್ರೇಯಸ್ಕರವಾದ ಸರಿಯಾದ ನ್ಯಾಯಮಾರ್ಗದಲ್ಲಿ ನಡೆಯುವರು. ಪ್ರ್ಆಣ ಹೋಗುವ ಪ್ರಸಂಗ ಬಂದರೂ ತಮ್ಮ ವ್ಯಕ್ತಿತ್ವಕ್ಕೆ ಕಲಂಕ ಹಚ್ಚಿಕೊಳ್ಳಲಾರರು . ಆಪತ್ಕಾಲದಲ್ಲಿ ಸ್ಥಿರಚಿತ್ತರಿರುವರು. ಘನವಾದ ರೀತಿಯಲ್ಲಿ ನಡೆದುಕೊಳ್ಳುವರು. ಇಂಥ ಖಡ್ಗದ ಅಂಚಿನ ಮೇಲೆ ನಡೆಯುವ ಕಠಿಣ ವೃತವನ್ನು ಅವರಿಗೆ ಯಾರು ಹೇಳಿದರು?
೧೫. ಯಜ್ಞಾಧ್ಯಯನ ದಾನಾನಿ ತಪ: ಸತ್ಯಂ ಧೃತಿ: ಕ್ಷಮಾ |
ಅಲೋಭ ಇತಿ ಮಾರ್ಗೋಯಂ ಧರ್ಮಸ್ಯ ಅಷ್ಟವಿಧ: ||
ಯಜ್ಞ, ಅಧ್ಯಯನ , ದಾನ , ತಪಸ್ಸು , ಸತ್ಯ , ಧೈರ್ಯ , ಕ್ಷಮೆ , ದುರಾಸೆ ಇಲ್ಲದಿರುವದು - ಇವು ಧರ್ಮದ ಎಂಟು ಮುಖ್ಯ ಅಂಶಗಳು.