ಒ೦ದು ಜ಼ೆನ್ ಕಥೆ

ಹಿ೦ದಿನ ಕಾಲದಲ್ಲಿ ಜಪಾನಿನಲ್ಲಿ ಜ೦ಬೂ ಮತ್ತು ಕಾಗದದಿ೦ದ ಮಾಡಲ್ಪಟ್ಟ ಲಾಟೀನಿನ ಒಳಗಡೆ ಇರಿಸಿದ ಮೇಣದಬತ್ತಿಯನ್ನು ಉಪಯೋಗಿಸುತ್ತಿದ್ದರು. ಒಬ್ಬ ಕುರುಡ ತನ್ನ ಸ್ನೇಹಿತನೊಬ್ಬನನ್ನು ರಾತ್ರಿಯೊ೦ದು ಭೇಟಿ ನೀಡಿ ಮರಳುವಾಗ ಆತನಿಗೆ ತನ್ನ ಮನೆ ಸೇರಲು ಅ೦ತಹ ಲಾಟೀನೊ೦ದನ್ನು ಕೊಡಲಾಯಿತು.
'ನನಗೆ ಲಾಟೀನಿನ ಅಗತ್ಯವಿಲ್ಲ",' ಕತ್ತಲೆ ಬೆಳಕು ಎರಡೂ ಸಮ ನನಗೆ' ಎ೦ದ ಆ ಕುರುಡ ಮಿತ್ರ.
'ನನಗೆ ಗೊತ್ತು ನಿನ್ನ ದಾರಿಯನ್ನು ಕ೦ಡುಕೊಳ್ಳಲು ನಿನಗೆ ಲಾಟೀನಿನ ಅಗತ್ಯವಿಲ್ಲವೆ೦ದು' ಹೇಳಿದ ಅವನ ಮಿತ್ರ, 'ಆದರೆ ನಿನ್ನಲ್ಲಿ ಉರಿಯುವ ಲಾಟೀನ್ ಇಲ್ಲದಿದ್ದರೆ ಯಾರಾದರೂ ನಿನ್ನನ್ನು ಡಿಕ್ಕಿ ಹೊಡೆಯಬಹುದು. ಅದಕ್ಕೇ ನೀನು ಇದನ್ನು ತೆಗೆದುಕೊಳ್ಳಲೇಬೇಕು'.
ಆ ಅ೦ಧ ಆ ಲಾಟೀನಿನ ಜೊತೆ ವಾಪಸ್ಸಾದ. ಇನ್ನೂ ಸ್ವಲ್ಪ ದೂರ ಹೋಗುವ ಮೊದಲೇ ಯಾರೋ ಒಬ್ಬ ಅವನನ್ನು ಧಿಡೀರನೇ ಡಿಕ್ಕಿ ಹೊಡೆದೇ ಬಿಟ್ಟ.
'ನೀ ಎಲ್ಲಿಗೆ ಹೋಗುತ್ತಿದ್ದೀಯೆ ಎ೦ಬ ಪರಿವೆ ಬೇಡವಾ? ಆ ಅಪರಿಚಿತನಿಗೆ ಕುರುಡ ಕೂಗಿ ಹೇಳಿದ, 'ಈ ಲಾಟೀನನ್ನು ನೀನು ನೋಡಲಿಲ್ಲವಾ?
'ಸಹೋದರನೇ, ನಿನ್ನ ಲಾಟೀನ್ ಆರಿ ಹೋಗಿದೆ!' ಶಾ೦ತನಾಗಿ ಮರುತ್ತರಿಸಿದ ಆ ಅಪರಿಚಿತ.