ಕವನ
ಓ ನೆನಪೇ.....
ಬಾರದಿರು ಎಂದಾಗ
ಬರುವ ನೀನು
ಬಾ..... ಎಂದಾಗ
ಬರಲೊಲ್ಲೆಯೇಕೆ ... ?
ವಿಕ್ರಮನ ಹಿಂದಿರುವ
ಬೇತಾಳನಂತೆ
ನನ್ನ ಹಿಂದೆ ನೀ
ಅಲೆಯುವೆಯೇಕೆ....?
ಬಿಡುವಿರದ ಸಮಯದಲ್ಲೂ
ಬೆಂಬಿಡದೆ ನೀ
ಭಾವನೆಗಳ ನೆಪದಲ್ಲಿ
ಬಂದೆನ್ನ ಕುಟುಕುವೆಯೇಕೆ....?
ಬಂದು ಹೋದರು ಸರಿಯೆ
ಅದರೆಡೆಯಲಿ, ಪ್ರಶ್ನೆಗಳ
ಮಳೆಯ ಸುರಿಸುವೆಯೇಕೆ....?
ಏಕೆ ನೆನಪೆ ಹೀಗೇಕೆ
ನಿತ್ಯ ಬಂದೆನ್ನ ಮನವ
ಕಲಕುತಿರುವೆ...!
Comments
ಉ: ಓ ನೆನಪೇ.....