ಓ ಪ್ರಿಯತಮೆ.... !!
ಕವನ
ಓ ಪ್ರಿಯತಮೆ.... !!
ನಿನ್ನ ನೋಡದ ಕಣ್ಣುಗಳು, ಕುರುಡಾಗಿವೆ
ನೀನಿಲ್ಲದ ಕ್ಷಣಗಳು, ಯುಗವಾಗಿವೆ
ಭೂಮಿಯೂ ತನ್ನ ಚಲನೆ ನಿಲ್ಲಿಸಿದೆ
ಈ ಜೀವ ನಿನ್ನನ್ನೆ ಕನವರಿಸುತ್ತಿದೆ....
ನನ್ನ ಹೃದಯದ ಬಡಿತ ನೀ
ನನ್ನ ನಗುವಿನ ಚಿಲುಮೆ ನೀ
ಕಲೆತಿರುವೆ ನನ್ನ ಆತ್ಮದೊಡನೆ
ನನ್ನ ಬದುಕಿನ ಅರ್ಥ ನೀ...
ನಿನ್ನ ನೆನಪಿನ ಮಳೆ
ಹನಿಯುತ್ತಿದೆ ಈಗ
ಎದೆಬಡಿತದ ಬಾಯರಿಕೆ
ನೀಗಿಸು ಬಾ ಬೇಗ....
---- ಗುರು ಹೆಚ್. ಎಂ.