ಕಂಪನ !!
ಕವನ
ಮನದ ಮೌನ
ಮೀಟಿದಾಗ
ಭಾರವಾಯ್ತು ಮೈಮನ !
ನಿನ್ನ ನೆನಪೇ
ಕಾಡಿದಾಗ
ತಡೆಯಲಾರೆ ಅಶ್ರುತರ್ಪಣ !!
ನಿನ್ನ ನೆನಪೇ
ನೆಪವಾಗಿ
ನೂಕುತಿರುವೆ ಜೀವನ !
ಏನೇ ಬರಲಿ
ಹೀಗೇ ಬಳಲಿ
ಗೆದ್ದು ಬರುವೆನು ಒಂದಿನ,
ಅದು ನನ್ನಲ್ಲಿಯ ನಿನ್ನ ಜಾಗವ
ನಾನೇ ಆವರಿಸಿದ ಆ ಕ್ಷಣ !!
ಬಾಳು ಒಂದು
ಬರೆದು ಮುಗಿಸಲಾಗದ ಕವನ!
ನನ್ನರೆಗಳಿಗೆಯ
ಮನದ ಕಂಪನಕೆ
ಛಿದ್ರವಾದ ಪದಗಳೇ ಈ ನನ್ನ ಕವನ!!
ಹೀಗೇ ಇನ್ನೂ ಎಷ್ಟು ಬರೆಯಬೇಕ?
ಪೂರ್ತಿ ಹಿಡಿದಿಡಲು ಬದುಕ !.
ಈ ಬಿಡಿ ಪದಗಳನ್ನೆ
ಹೊಂದಿಸಿ ಕಟ್ಟಿಕೊಂಡರೆ ಬಾಳುವೆ,
ಆಗ ನಿನ್ನನೆ ನೀನು ಆಳುವೆ !!
Comments
ಉ: ಕಂಪನ !!
In reply to ಉ: ಕಂಪನ !! by gurudutt_r
ಉ: ಕಂಪನ !!
In reply to ಉ: ಕಂಪನ !! by mnsantu_7389
ಉ: ಕಂಪನ !!
In reply to ಉ: ಕಂಪನ !! by gurudutt_r
ಉ: ಕಂಪನ !!