ಕಚೋರಿ

ಕಚೋರಿ

ಬೇಕಿರುವ ಸಾಮಗ್ರಿ

ಆಲೂಗಡ್ಡೆ ೨, ಗೋಧಿ ಹಿಟ್ಟು - ೧ ಕಪ್, ಮೈದಾ ಹಿಟ್ಟು ಅರ್ಧ ಕಪ್, ಬಟಾಣಿ ಕಾಳುಗಳು - ಅರ್ಧ ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ - ೪, ಶುಂಠಿಯ ತುರಿ ೧ ಚಮಚ, ಇಂಗು ಕಾಲು ಚಮಚ, ಜೀರಿಗೆ ಹುಡಿ - ೧ ಚಮಚ, ಅರಸಿನ ಕಾಲು ಚಮಚ, ಗರಮ್ ಮಸಾಲಾ ಹುಡಿ - ೧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಗೋಧಿ ಹಿಟ್ಟು, ಮೈದಾ ಹಿಟ್ಟುಗಳಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಹುಡಿ ಮಾಡಿ. ಬಟಾಣಿ ಕಾಳುಗಳು, ಶುಂಠಿ ತುರಿ, ಹಸಿಮೆಣಸಿನಕಾಯಿ, ಇಂಗು ಜೀರಿಗೆ ಹುಡಿ, ಅರಸಿನ, ಗರಮ್ ಮಸಾಲಾ ಹುಡಿ, ಉಪ್ಪು ಎಲ್ಲವನ್ನೂ ಸೇರಿಸಿ ನೀರು ಹಾಕದೆ ಮಸಾಲೆ ರುಬ್ಬಿ. ಬೇಯಿಸಿದ ಆಲೂಗಡ್ಡೆಗೆ ರುಬ್ಬಿದ ಮಸಾಲೆ ಸೇರಿಸಿ ಚೆನ್ನಾಗಿ ಕಲಕಿ. ಕಲಸಿದ ಗೋಧಿ-ಮೈದಾ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಪೂರಿ ಆಕಾರಕ್ಕೆ ಲಟ್ಟಿಸಿ ಆಲೂ ಮಿಶ್ರಣ ತುಂಬಿ, ಅಂಚುಗಳನ್ನು ಅಂಟಿಸಿ ಮೆಲುವಾಗಿ ಲಟ್ಟಿಸಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಕಚೋರಿ ರೆಡಿ. ಮೊಸರು ಭಜ್ಜಿ ಇಲ್ಲವೆ ಟೊಮೆಟೋ ಸಾಸ್ ನೊಂದಿಗೆ ಸವಿಯಲು ರುಚಿಕರ.