ಕಣ್ಣ ಅಂಚಿನಲಿ

ಕಣ್ಣ ಅಂಚಿನಲಿ

ಕವನ

 
ಕಣ್ಣ  ಅಂಚಿನಲಿ ಒಲವ ನೆನಪೊಂದು
ಬಳಿ ಸಾರಿದೆ ಧರೆ ನೋಡಿದೆ
ಹೃದಯ ಗೂಡಿಗೆ ಸಿಡಿಲು
ತಾ ಬಡಿದು ನೋವು ಮಳೆಯಾಗಿ
ಒಲವು ಕುರುಡಾಗಿ
ಬಾನ ಮೇಲಿಂದ ಜಾರಿದೆ
ಮನಸ್ಸು ಮಣ್ಣಾಗಿ ಕನಸು ಕೊನೆಯಾಗಿ
ಉಸಿರ ಹಸಿರಿಗ ಬಾಡುತಿದೆ
ನೆನಪು ಮರೆಯಾಗಿ ಒಲವು ಕೊನೆಯಾಗಿ
ಹೋಗುವ ಮುನ್ನ ಬರಬಾರದೇ ಗೆಳತಿ
ಮರಳಿ ಬರಬಾರದೆ…….

 

Comments