ಕನಸಿನಲಿ ದೇವರು

ಕನಸಿನಲಿ ದೇವರು

                                    ಕನಸಿನಲಿ ದೇವರು


ಇತ್ತೀಚೆಗೆ ಫೆಸ್ಬುಕ್ ತಾಣದಲ್ಲಿ ಗೆಳೆಯರೊಬ್ಬರು ನನ್ನೊಂದಿಗೆ ಒಂದು ಅಂಕಣವನನ್ನು ಶೇರ್ ಮಾಡಿಕೊಂಡಿದ್ದರು.ಅದರ ಸಾರಂಶವನ್ನು ಸಂಪದ ಗೇಳಯರೊಂದಿಗೆ ಹಂಚಿಕೋಳ್ಳುವ ಬಯಕೆಯಿಂದ ಈ ಲೇಖನ ಬರೆಯುತ್ತಿದ್ದೇನೆ.
         ಒಮ್ಮೆ ಒಬ್ಬನಿಗೆ ಕನಸೊಂದು ಬೀಳುತ್ತದೆ. ಅದರಲ್ಲಿ ಅವನು ದೇವರೊಂದಿಗೆ ಜೊತೆಗೂಡಿ ಸಮುದ್ರತಟದ ಮೇಲೆ ನಡಿಯುತ್ತಾ ಹೋಗುತ್ತಿರುತ್ತಾನೆ. ಆಗ ಆಕಾಶದಲ್ಲಿ ಒಮ್ಮೆಲೆ ಅವನ ಜೀವನದ ದೃಶ್ಯಮಾಲೆ ಮಿಂಚಿನಂತೆ ಮೂಡುತ್ತದೆ.ಪ್ರತಿ ದೃಶ್ಯದಲ್ಲಿ ಅವನು ಎರಡು ಜೊತೆ ಹೆಜ್ಜೆಯ ಗುರುತುಗಳು ಮರಳದಂಡೆಯ ಮೇಲೆ ಮೂಡುರಿವುದನ್ನು ಗಮನಿಸುತ್ತಾನೆ.ಒಂದು ಜೋತೆ ತನ್ನದೆಂದು ಇನ್ನೊಂದು ಜೋತೆ ದೇವರದೆಂದು ಎಣಿಸುತ್ತಾನೆ.ಹೀಗೆ ಮುಂದುವರೆದಂತೆ ಅವನ ಜೀವನದ ಕೊನೆಯ ದೃಶ್ಯ ಆಕಾಶದಲ್ಲಿ ಮೂಡುತ್ತದೆ.ಆಗ ಅವನು ಒಮ್ಮೆ ಹಿಂತಿರುಗಿ ಮರಳ ದಂಡೆಯಕಡೆ ನೋಡುತ್ತಾನೆ.
       ಅವನು ಅನೇಕ ಸಂದರ್ಭದಲ್ಲಿ ಮರಳಿನ ಮೇಲೆ ಕೇವಲ ಒಂದು ಜೊತೆ ಹೆಜ್ಜೆ ಗುರುತನು ಮಾತ್ರ ನೋಡುತ್ತಾನೆ.ಅದೂ ಅವನ ಅನೇಕ ಸಂಕಷ್ಟದ ಹಾಗು ದುಃಖಬರಿತ ದಿನಗಳಲ್ಲಿ ಆ ರೀತಿ ಆಗಿರುವದನ್ನು ನೋಡಿ ತುಂಬಾ ನೊಂದುಕೊಂಡು ದೇವರನ್ನು ಪ್ರಶ್ನಿಸುತ್ತಾನೆ.
       'ದೇವರೆ, ನೀನು ಹೇಳಿದ್ದೆ,ಯಾರು ನಿನ್ನನ್ನು ಅನುಸರಿಸುತ್ತಾರೊ,ನೀನು ಅವರೊಂದಿಗೆ ಸದಾ ಇರುವೆ ಎಂದು . ಆದರೆ ಈಗ ನನ್ನ ಗಮನಕ್ಕೆ ಬಂದುದೇನೆಂದರೆ ನನ್ನ ಅತೀ ಕಷ್ಟದ ದಿನಗಳಲ್ಲಿ ನಿನ್ನ ಅವಶ್ಯಕತೆ ಬೇಕಾಗಿರುವ ಸಮಯದಲ್ಲಿ ನೀನು ನನ್ನನ್ನು ಬಿಟ್ಟು ಹೋದಕಾರಣ ನಾನು ಒಂದೇ ಜೊತೆ ಹಜ್ಜೆಯ ಗುರುತನ್ನು ಮಾತ್ರ ಮರಳದಂಡೆಯ ಮೇಲೆ ಮೂಡಿರುವದನ್ನು ನೋಡಿದೆ'ಎಂದು ಹೇಳುತ್ತಾನೆ.
        ಆಗ ದೇವ ಹೇಳುತ್ತಾನೆ, 'ಮಗು, ನನ್ನ ಕಂದ,ನೀನು ಯಾವಾಗ ಮರಳದಂಡೆಯ ಮೇಲೆ ಒಂದು ಜೊತೆ ಹೆಜ್ಜೆ ಗುರುತನ್ನು ಮಾತ್ರ ನೋಡಿದ್ದೆಯೊ ಆಗ ಆ ಸಂದರ್ಭದಲ್ಲಿ ನಾನು ನಿನ್ನನ್ನು ನನ್ನ ತೋಳತೆಕ್ಕೆಯಲ್ಲಿ ಎತ್ತಿ ಕೊಂಡಿದ್ದೆ',ಎಂದು ಹೇಳುತ್ತಾನೆ.
        ಎಷ್ಟು ಮಾರ್ಮಿಕವಾಗಿದೆ ಅಲ್ಲವೆ?
ಎಂಥಹ ಸಂಕಷ್ಟದ ದಿನಗಳಲ್ಲೂ ಆ ಕರುಣಾಮಯಿ ದೇವರು ನಮ್ಮನ್ನು ಕೈ ಬಿಡುವುದಿಲ್ಲಾ ಎಂದರಿಯಲು ಈ
 ಕನಸು ಒಂದು  ಕಥೆಯಂತೆ ಇದ್ದರೂ ನಮ್ಮ ಮನಸ್ಸಿಗೆ ಎಷ್ಟೋ ಸ್ತೈರ್ಯ ನೀಡುತ್ತದೆ ಎಂದು ನನ್ನ ಅನಸಿಕೆ

Comments