ಕನಸಿನ ಮನೆ

ಕನಸಿನ ಮನೆ

ಬರಹ

ನಮ್ಮ ಮನೆ
******

ಹೀಗೆ ಇದ್ದರೆಷ್ಟು ಚೆನ್ನ
ಒಂದು ಮನೆಯ ಚಿತ್ರಣ.
ಬಾಳಬಂಡಿ ಪಯಣದಲ್ಲಿ
ಇರದೆ ಯಾವ ತಲ್ಲಣ.

ಹೊಳೆವ ಚುಕ್ಕಿಯ ಹೆಕ್ಕಿ
ಕಟ್ಟಿದ ಹೆಬ್ಬಾಗಿಲ ತೋರಣ.
ಏಳು ಬಣ್ಣದ ಇಂದ್ರಚಾಪದ
ಕಮಾನು ಕಟ್ಟಿದ ಅಂಕಣ.

ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ
ಪಾರಿಜಾತದ ಹಿತ್ತಲು.
ತುಂಬುತಿಂಗಳು ಕ್ಷೀರಪಥದೊಳು
ತೊಳೆದು ಇರುಳಿನ ಕತ್ತಲು.

ಹಿರಿಯ ಕಿರಿಯರ ನಡುವೆ
ಮಮತೆ ಒಲುಮೆಯ ಬಂಧನ.
ಕಾಮಧೇನು ಕಲ್ಪವೃಕ್ಷ
ಸೇರಿ ಸೊಬಗಿನ ನಂದನ
-೦-