ಕನಸುಗಳು ಸೇರಿದಾಗ...
ಕವನ
ಕನಸುಗಳ ಜೊತೆಯಲ್ಲಿ
ಬಂದು ಸೇರಿದೆಯಂದು
ನನ್ನೊಲವಿನ ರಾಣಿ ಕುಸುಮ ಬಾಲೆ
ಪ್ರೀತಿಯೊಡಲಿನ ನುಡಿಯ
ನುಡಿಯುತಲೆ ಬೆಸುಗೆಯೊಳು
ಸುಖವ ಮೆಲ್ಲುತಲಿಹಳು ಸಹನ ಶೀಲೆ
ಜೊತೆಯಾಗಿ ಕೈಹಿಡಿದು
ಬಹುದೂರ ಸಾಗಿಹೆವು
ಮಗನೊಬ್ಬ ಇಹನಿಂದು ಧೀರನಾಗಿ
ಮೋಸಗಳ ಮೆಟ್ಟುತಲಿ
ಕಾಟಗಳ ಸಹಿಸುತಲಿ
ನಡೆದಿಹೆವು ದಾರಿಯಲಿ ಮೌನವಾಗಿ
ಬಂಧುಗಳ ಜೊತೆಗೂಡಿ
ಮಧುಲತೆಯ ತಿಳಿಗೊಳದೆ
ಬದುಕಿನಲಿ ಸಾಗಿಹೆವು ಮುಂದೆ ಹೋಗಿ
ಬೆಳಕಿತ್ತ ಮನಗಳಿಗೆ
ಮನಸಾರೆ ವಂದಿಸುತ
ಬಾಳಿನೊಳು ಸವಿಯಿರಲು ಗೆಲುವು ಬಾಗಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್