ಕನಸು, ಕಣಸು

ಕನಸು, ಕಣಸು

ಬರಹ

ಕನಸು, ಕಣಸು (ನಾ)
=ಸ್ವಪ್ನ; ನಿದ್ದೆಯಲ್ಲಿ ಕಾಣುವ ನೋಟ
ಪುಟ್ಟಿದಂದಿಂ ತೊಟ್ಟಿಂತಪ್ಪುಣಿಸಂ ಕನಸಿನೊಳಪ್ಪೊಡಂ ಕಂಡಱಿಯದ ಮಗಂ (ವಡ್ಡಾರಾಧನೆ ೭೮.೨೦); ಅೞ್ಕಿಱನಿೞ್ಕುಳಿಗೊಂಡಲಂಪುಗಳ್ ಕನಸಿನೊಳಂ ಪಳಂಚಲೆವು[ವೆ]ನ್ನೆದೆಯೊಳ್ (ಪಂಪಭಾರತ ೪.೧೦೬); ಇರುಳ್ ಕಂಡ ಕನಸುಗಳಂ ಪಗಲ್ ನೆನೆವಂತೆ (ಧರ್ಮಾಮೃತ ೧.೧೫೪); ಕನಸಿನ ಭತ್ತಕ್ಕೆ ಗೋಣಿಯಾಂಪರೆ (ಲೀಲಾವತಿ ೪.೭೦); ಮೂಗರು ಕಂಡ ಕನಸಿನಂತೆ ಮೆಱೆವಾತ್ಮಯೋಗವನಾರಾಡಬಹುದು (ಭರಚ ೨.೪೨);
=ಸುಳ್ಳು; ಅಸತ್ಯ; ಕಲ್ಪನೆ
ಉದಾರಮಹೇಶ್ವರನೀಶ್ವರವರಪ್ರಸಾದಮೆಲ್ಲಂ ತನಗೆ ನೆನಸಾಗೆಯುಂ ಕನಸಿನಂದಮಾಗಿ ತೋಱೆ (ಪಂಪಭಾರತ ೧೧.೧೩೧ವ); ಮರುಳಕ್ಕ ಕನಸಿನ ತೊಱೆಯೊಳ್ ನೀರ್ಗುಡಿದು ತಣಿವನಱಸಿದರೊಳರೇ (ಶಾಂತಿಪುರಾಣ ೪.೯೮); ಕನಸಲ್ಲಿದು ನಿಶ್ಚಯಮೆಂದಳ್ಕಿ ನೋಡಿ (ಧರ್ಮಾಮೃತ ೩.೧೧೪)
ಕಣಸು ಬಿರಿದೊಡನೆ ನನಸು ನುಗ್ಗಿತು ಬಗೆ ಭೂಮಿಕೆಗೆ (ಶ್ರೀರಾಮಾ ೫೨೪.೬೪೭)

ಕನಸಿನಗಂಟು (ಅಲಂ)= ಅಸಾಧ್ಯವಾದುದು; ಕೈಗೆ ನಿಲುಕಲಾರದುದು

[ತಮಿಳು: ಕನವು; ಮಲಯಾಳ: ಕಿನಾವು; ಕೊಡವ: ಕೆನಚಿ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet