ಕನ್ನಡಿಗರ ನುಡಿ

ಕನ್ನಡಿಗರ ನುಡಿ

ಬರಹ

"ಎಂಥ ಸೌಂದರ್ಯ ನೋಡು, ನಮ್ಮ ಕರುನಾಡ ಬೀಡು..." ಎಂದು ಹಾಡಿಹೊಗಳಿರುವ ಕವಿಗಳ ನಾಡು, ಕಲೆಗಳ ನೆಲೆಬೀಡು, ಸಂಸ್ಕೃತಿಯ ತವರೂರು, ಈ ಚಂದದ, ಗಂಧದ, ಚೆಲುವ ಕರುನಾಡು, ವೈವಿಧ್ಯತೆಗೆ ಹೆಸರು ಈ ಕರುನಾಡು.

"ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು..." ಎಂದು ಹೇಳಿದ ಮನದಟ್ಟು ಮಾಡಿಸಿದ ನಡೋಜ ಕುವೆಂಪು ಹುಟ್ಟಿದ ನಾಡು ಇದು.

ತಾಯಿ ಭುವನೇಶ್ವರಿಯ ಕಿರೀಟ ಪ್ರಕೃತಿಯ ಸೌಂದರ್ಯ, ಮುಖ ಕಮಲ ಸಂಸ್ಕೃತಿ, ಆಶಿರ್ವದಿಸೊ ಅಂಗೈಯಿಂದ ಕರುಣೆಯ ಸಾಗದೀ ಪ್ರತಿಯೊಬ್ಬ ಕನ್ನಡಿಗನನ್ನು ಕಾಪಡುತ್ತಾಳೆ. ಕಲೆಯೆ ಪೂಜೆ, ಕನ್ನಡ ಭಾಷೆಯ ಮಂತ್ರ, ಭಕ್ತಿಯೆ ಗಂಟೆಯ ನಾದ. ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ತಾಯಿಯು ನೆಲೆಸಿದ್ದಾಳೆ.