ಕನ್ನಡ ನಾಡಿನ ಮಡಿಲ ಕಂದನಿವನು

ಕನ್ನಡ ನಾಡಿನ ಮಡಿಲ ಕಂದನಿವನು

ಕವನ

ಮಕ್ಕಳೆಲ್ಲ ಸೇರಿಕೊಂಡು ಪ್ರವಾಸಕೆ ಹೋಗೋಣ

ದೊಡ್ಡ ಬಸ್ಸಿನಲ್ಲಿ ಕುಳಿತು ಸಂತಸದಿ ನಲಿಯೋಣ|

ಮೈಸೂರಿನ ವೃಂದಾವನದ ಅಂದಚಂದ ನೋಡೋಣ

ಹೂಗಳು ಅರಳಿ ನಿಂತ ಸೊಬಗನ್ನು ಸವಿಯೋಣ||

 

ಸಾಲಾಗಿ ಕೈಕೈ ಹಿಡಿದು ನಾವು ನಡೆಯೋಣ

ನಮ್ಮ ಹೆಮ್ಮೆಯ ವಿಶ್ವೇಶ್ವರಯ್ಯ ಮಾಮನನ್ನು ನೆನೆಯೋಣ|

ಇಲ್ಲಿ ಬನ್ನಿ ಕನ್ನಂಬಾಡಿ ಕಟ್ಟೆಯನ್ನು ನೋಡಿರಿ

ಅದೋ ಅಲ್ಲಿ ನೀರ ರಾಶಿ ನಿಂತಿಹುದ ಕಾಣಿರಿ||

 

ಅಣೆಕಟ್ಟಿನ ಸೌಂದರ್ಯ ಆಹಾ! ಎಷ್ಟು ಮೋಹಕ

ಕೃಷ್ಣರಾಜ ಸಾಗರ ಕಾವೇರಿಯ ಗರ್ಭವು|

ಹರಿವ ನೀರ ಮೇಲ್ಗಡೆ ನಾವೆಯಲಿ ತೇಲೋಣ

ಕಾವೇರಮ್ಮನ ಮೂರುತಿಯ ದರುಶನ ಮಾಡೋಣ||

 

ಕನ್ನಡ ನಾಡಿನ ಮಡಿಲ ಕಂದನಿವನು

ಬುದ್ಧಿ ವಂತ ಜಾಣ ಪ್ರಸಿದ್ಧಿಯನ್ನು ಹೊಂದಿದನು

ಕಾರ್ಖಾನೆಗಳ ಕಟ್ಟಿಸಿ ಹೆಸರನ್ನು ಪಡೆದನು

'ಭಾರತರತ್ನ' ಕಿರೀಟವನ್ನು ತೊಟ್ಟನು||

 

ತಾಂತ್ರಿಕ ವಿದ್ಯಾಭ್ಯಾಸದ ತಳಪಾಯ ಮಾಡಿದನು

ಬಡವರಿಗೂ ಕಲಿಯಲು ಆದ್ಯತೆಯ ನೀಡಿದನು|

ಆರ್ಥಿಕ ಪ್ರಗತಿಯ ರುವಾರಿಯಾದನು

ನಾಡು ಕಂಡ ಅಪ್ರತಿಮ ಆಡಳಿತಗಾರನು||

(ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮ ದಿನ- ಇಂಜಿನಿಯರ್ಸ್ ಡೇ ಸಂದರ್ಭದ ಮಕ್ಕಳ ಪದ್ಯ)

-ರತ್ನಾ ಕೆ ಭಟ್, ತಲಂಜೇರಿ ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್