ಕನ್ನಡ ನೆಲದ ಚಂದದ ಮಲ್ಲಿಗೆ ಕುಸುಮ- 'ಇನ್ ಫೊಸಿಸ್' ಬೆಳ್ಳಿ- ಹಬ್ಬ ಆಚರಿಸಿತು ! !

ಕನ್ನಡ ನೆಲದ ಚಂದದ ಮಲ್ಲಿಗೆ ಕುಸುಮ- 'ಇನ್ ಫೊಸಿಸ್' ಬೆಳ್ಳಿ- ಹಬ್ಬ ಆಚರಿಸಿತು ! !

ಬರಹ

ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ' ಮೈಸೂರಿನಲ್ಲಿ, ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಂಗ ಸಜ್ಜಿಕೆ ಎಲ್ಲಾ ವ್ಯವಸ್ಥಿತವಾಗಿದೆ. ಸ್ಥಳ : ಮೈಸೂರಿನ ಇನ್ಫೋಸಿಸ್ ಸಂಸ್ಥೆಯ, ೩೦೦ ಎಕರೆ ವಿಶಾಲ ವಿಶಾಲ ಭವ್ಯಾಂಗಣ ! ಪ್ಲ್ಯಾನಿಂಗ್ ಕಮೀಶನ್ ಉಪ ಅಧ್ಯಕ್ಷ, ಮೋನ್ಟೆಕ್ ಸಿಂಗ್ ಅಹ್ಲು ವಾಲಿಯ, ಕರ್ನಾಟಕದ ಮುಖ್ಯ ಮಂತ್ರಿ, ಕುಮಾರಸ್ವಾಮಿ, ನ್ಯಾಸ್ಡಾಕ್ ಸಿ.ಇ.ಒ, ಗ್ರೆವೀಲ್ಡ್, ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸಾ.೭-೩೦ ಕ್ಕೆ, ಶ್ರಿ. ನಾರಾಯಣಮೂರ್ತಿ ಯವರು, ಘಂಟೆ ಜಗ್ಗಿ ಬಾರಿಸಿದಾಗ, ನ್ಯೂಯಾರ್ಕ್ ನ, 'ಟೈಮ್ಸ್ ಸ್ಕ್ವೇರ್' ನಲ್ಲಿರುವ ೭ ಅಂತಸ್ತಿನ ಭವ್ಯ ಕಟ್ಟಡದಲ್ಲಿ ನ ತೆರೆಯಮೇಲೆ ಬೆಳ್ಳಿಹಬ್ಬದ ಸಮಾರಂಭದ ದೃ‍ಷ್ಯಗಳು ಮೂಡಿ ಬಂದವು ! ಮೈಸುರಿನ ೩,೦೦೦ 'ಇನ್ಫೋಶಿಯನ್ಸ್' ಸಂಭ್ರಮದಿಂದ ಹರ್ಷೋದ್ಗಾರ ಮಾಡಿ ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಹೀಗೆ 'ಬೆಳ್ಳಿ ಹಬ್ಬ'ದ ಶುಭಾರಂಭವಾಯಿತು.

೧೯೮೧ ರಲ್ಲಿ ಶ್ರಿಮತಿ ಸುಧಾ ಮೂರ್ತಿಯವರ ಕೂಡಿಟ್ಟ ೧೦,೦೦೦ ರೂ. ಬಂಡವಾಳದಿಂದ ಆರಂಭಗೊಂಡ 'ಇನ್ಫೋಸಿಸ್' ಈಗ ದೈತ್ಯಾಕಾರವಾಗಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಹಬ್ಬಿದೆ. ಅಮೆರಿಕದಿಂದ ಹಿಡಿದು, ಯು.ಎ.ಐ.ವರೆಗೆ ಇದರ ಶಾಖೆಗಳಿವೆ. ಒಟ್ಟು ೫೮,೪೦೯ ಜನ ತಂತ್ರಜ್ಞ ರು ಎಡೆಬಿಡದೆ ದುಡಿಯುತ್ತಿದ್ದಾರೆ. ಅದರ ಆದಾಯ ಈಗ, ೯ ಸಾವಿರ ಕೋಟಿಗೂ ಹೆಚ್ಚಾಗಿದೆ.

ಕನ್ನಡ ನಾಡಿನ 'ಸಾಫ್ಟ್ ವೇರ್ ಕ್ಷೇತ್ರ'ದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ 'ಇನ್ಫೋಸಿಸ್' ಸಂಸ್ಥೆ, ಭಾರತದಲ್ಲೆಲ್ಲಾ ಹೆಮ್ಮೆಯ ಸಂಕೇತವಾಗಿದೆ.೧೯೮೧ ನಲ್ಲಿ ಮುಂಬೈನ (ಮಾತುಂಗಾ) ಎನ್.ಎಸ್.ರಾಘವನ್, ರವರ ಮನೆಯಲ್ಲಿನ ಚಿಕ್ಕ ಕೊಠಡಿಯಲ್ಲಿ ೬ ಜನ ತಂತ್ರಜ್ಞರು, ೪ ಘಂಟೆಗಳ ಕಾಲ ಸಮಾಲೋಚಿಸಿ ಇನ್ಫೊಸಿಸ್ ನ 'ನೀಲನಕ್ಷೆ' ಯನ್ನು ತಯಾರಿಸಿದ್ದರು.

'ಇನ್ಫೊಸಿಸ್' ನ ಪ್ರಯಾಣದ ಮೈಲುಗಲ್ಲುಗಳು :

೧. ೧೯೮೧ ರ ಜುಲೈ ೨, ನೆಯ ತಾರೀಖು ಪ್ರಾರಂಭ.
೨. ೧೯೮೭ - ಅಮೆರಿಕದಲ್ಲಿ ಶಾಖೆಯ ಸ್ಥಾಪನೆ.
೩. ೧೯೯೩- ಮುಂಬೈ ಶೇರು ಪೇಟೆಯಲ್ಲಿ, ಶೇರ್ ಬಿಕರಿ.
೪. ೧೯೯೫- ಐ.ಸಿ.ಎ.ಐ. ನಿಂದ ಅತ್ಯುತ್ತಮ 'ವಾರ್ಷಿಕ ವರದಿ ಪ್ರಶಸ್ತಿ'.
೫. ಸಾಮಾಜಿಕ ಸೇವೆಗಾಗಿ 'ಇನ್ಫೊಸಿಸ್ ಪ್ರತಿಷ್ಠಾನ' ದ ಸ್ಥಾಪನೆ.
೬. ೧೯೯೬- ಇಂಗೆಂಡಿ ನಲ್ಲಿ ಶಾಖೆ.
೭. ೧೯೯೭- ಕೆನಡಾದಲ್ಲಿ ಶಾಖೆ.
೮. ೧೯೯೮- 'ಉತ್ಕೃಷ್ಟ ಕಾರ್ಪೊರೆಟ್' ಪ್ರಶಸ್ತಿ
೯. ೧೯೯೯- ಕಂಪನಿಯ ಆದಾಯ ೧೦೦ ಕೋಟಿ ಡಾಲರ್ ಗಿಂತ ಅಧಿಕ.
೧೦. ೨೦೦೦- ನ್ಯುಯಾರ್ಕ್ ನ 'ನಾಸ್ಡ್ಯಾಕ್ ಷೇರ್' ಬಾಝಾರ್ ನಲ್ಲಿ ಹೆಸರು
ಧಾಖಲಿಸಿದ್ದು.ಭಾರತದ ಮೊಟ್ಟಮೊದಲನೆಯ ಕಂಪನಿಯೆಂಬ ಹೆಗ್ಗಳಿಕೆ !

ನಾರಾಯಣಮೂರ್ತಿಯವರು, ಅಮೆರಿಕೆಯ "ಮೈಕ್ರೊಸಾಫ್ಟ್ ವೇರ್" ಸಂಸ್ಥೆಯ ಸಿ.ಇ.ಒ, 'ಬಿಲ್ ಗೇಟ್ಸ್' ನಂತೆ, , ಆಗಸ್ಟ್ ೨೦ ರಂದು, ತಮ್ಮ ಹುಟ್ಟಿದ ಹಬ್ಬದ ದಿನ ನಿವೃತ್ತರಾಗುವುದಾಗಿ ಘೊಷಿಸಿದ್ದಾರೆ. ತಮ್ಮ ಜಾಗದಲ್ಲಿ ಶ್ರಿ.ನಂದನ್ ನಿಲಕೆಣಿಯವರು, ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೊಗುತ್ತಾರೆ. ಮೂರ್ತಿ, ಹೆಚ್ಚುವರಿ ನಿರ್ದೇಶಕರಾಗಿ ಮುಂದೆಯು ಇರುತ್ತಾರೆ.

"ಇನ್ಫೊಸಿಸ್ ಬೆಳ್ಳಿ ಹಬ್ಬದ ಕಾರ್ಯಕ್ರಮ" ೨ ದಿನ ಹಮ್ಮಿಕೊಳ್ಳಲಾಗಿತ್ತು. ಮೊದಲ ದಿನ, ಭಾರತದ ಹಣಕಾಸು ಮಂತ್ರಿ ಶ್ರಿ.ಚಿದಂಬರಮ್ ರವರು ಬಂದು ಸಮಾರಂಭದ ಉದ್ಘಾಟನೆಯನ್ನು ಮಾಡಿದ್ದರು. ಎರಡನೆಯ ದಿನ, ರಾಜ್ಯದ ಮುಖ್ಯಮಂತ್ರಿ, ಶ್ರಿ. ಕುಮಾರ ಸ್ವಾಮಿಯವರು, ಅಹ್ಲುವಾಲಿಯ, ಮತ್ತು ಗಣ್ಯರು ಆಗಮಿಸಿದ್ದರು.ಚಿದಂಬರಂ ರವರು, "ತಮ್ಮ ಕಣ್ಣುಗಳನ್ನು ನಂಬಲು ಸಾಧ್ಯವಿಲ್ಲ, ನಾನು ಭರತದಲ್ಲಿದ್ದೆನೊ ಅಥವ ಅಮೆರಿಕದಲ್ಲೋ" ಎಂದರು. "ಇನ್ಫೊಸಿಸ್ ಭಾರತದ ಆಶೊತ್ತರಗಳನ್ನು ದಿಗಂತಕ್ಕೆ ಒಯ್ದ ಸಂಸ್ಥೆಯಾಗಿದೆ," ಎಂದು ತಿಳಿಸಿದರು. ಈ ದಿನದ ಟೈಮ್ಸ್ ಆಫ್ ಇಂಡಿಯ ದೈನಿಕ, ಶ್ರಿ.ನಾರಾಯಣ ಮೂರ್ತಿಯವರನ್ನು ಒಬ್ಬ "ಆದರ್ಶ ಕರೋಡ್ ಪತಿ" ಎಂದು ವರ್ಣಿಸಿದೆ !

ಕರ್ಣಾಟಕದ ಮಣ್ಣಿನಲ್ಲಿ ಹುಟ್ಟಿ ಬೆಳೆದ "ಅನರ್ಘ್ಯ ರತ್ನ"ಗಳಲ್ಲಿ 'ಇನ್ಫೊಸಿಸ್' ಒಂದು ದೈತ್ಯ ಪ್ರತಿಭೆಯ 'ಜನಕಲ್ಯಾಣ ಸಂಸ್ಥೆ' !

೧೨೬ ಕೋಟಿ, "ಕಾರ್ಪಸ್ ಹಣದ ಗಂಟ"ನ್ನು 'ಇನ್ಫೊಸಿಸ್ ಸಂಸ್ಥೆ' ಸ್ಥಾಪಿಸಿ, ತನ್ನ ನೆಚ್ಚಿನ ಕೆಲಸ ಗಾರರಿಗೆ 'ಉಪಹಾರ' ವಾಗಿ ಕೊಡಲಿದೆ.

ನಮ್ಮ ಕನ್ನಡಿಗರ ಹೆಮ್ಮೆಯ ಸಂಸ್ಥೆ, 'ಇನ್ಫೊಸಿಸ್' ನೂರು ಕಾಲ ಬಾಳಲಿ ! ತನ್ನ ಮಲ್ಲಿಗೆಯ ಪರಿಮಳವನ್ನು ಎಲ್ಲೆಡೆ ಪಸರಿಸಲಿ !!