ಕನ್ನಡ ಪತ್ರಿಕಾ ಲೋಕ (ಭಾಗ ೧೦೭) - ಕರಾವಳಿ ಮಾರುತ

ಕನ್ನಡ ಪತ್ರಿಕಾ ಲೋಕ (ಭಾಗ ೧೦೭) - ಕರಾವಳಿ ಮಾರುತ

ಪ್ರಾರಂಭದ ದಿನಗಳಲ್ಲಿ ಸಂಜೆ ದಿನ ಪತ್ರಿಕೆಯಾಗಿದ್ದು ನಂತರ ಬದಲಾದ ಪರಿಸ್ಥಿತಿಯಲ್ಲಿ ವಾರ ಪತ್ರಿಕೆಯಾದ ‘ಕರಾವಳಿ ಮಾರುತ’. ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವುದೇ ಈ ಪತ್ರಿಕೆಯ ಹೆಗ್ಗಳಿಕೆ. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು, ನಾಲ್ಕು ಪುಟಗಳು ವರ್ಣದಲ್ಲೂ, ಉಳಿದ ೮ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮಾರ್ಚ್ ೩೧, ೨೦೨೩ (ಸಂಪುಟ ೨೫, ಸಂಚಿಕೆ ೮) ರ ಸಂಚಿಕೆ. ಈ ಸಂಚಿಕೆಯಲ್ಲಿ ರಾಜಕೀಯ ಹಾಗೂ ಕ್ರೈಂ ಸುದ್ದಿಗಳಿವೆ. ಮುಖಪುಟದಲ್ಲಿ ‘ಹಣದಾಹಿಯಾದ್ನಾ ವಕ್ಫ್ ಅಧ್ಯಕ್ಷ ಶಾಫಿ’ ಎಂಬ ಅಗ್ರ ಲೇಖನವಿದೆ. ಇದರ ಜೊತೆ ಮಂತ್ರಿಯಾದ ಅಂಗರ ಬಗ್ಗೆ, ಅಂಡರ್ ವರ್ಲ್ಡ್ ಬಗ್ಗೆ ಮಾಹಿತಿ ನೀಡುವ ಲೇಖನಗಳಿವೆ. ಸುದೇಶ್ ಕುಮಾರ್ ಅವರು ಪತ್ರಿಕೆಯ ಸಂಪಾದಕರು, ಮಾಲೀಕರು ಹಾಗೂ ಮುದ್ರಕರು ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅವರು ‘ನಿಮ್ಮೊಡನೆ' ಎಂಬ ಸಂಪಾದಕೀಯದಲ್ಲಿ ಈಗ ಹೆಚ್ಚುತ್ತಿರುವ ಹೃದಯಾಘಾತದ ಕಥೆ ಬರೆದಿದ್ದಾರೆ.

‘ಕರಾವಳಿ ಮಾರುತ’ ಪತ್ರಿಕೆಯ ಕಚೇರಿಯು ಮಂಗಳೂರಿನ ಕೆ ಎಸ್ ರಾವ್ ರಸ್ತೆಯಲ್ಲಿದೆ. ಪತ್ರಿಕೆಯನ್ನು ಮಂಗಳೂರಿನ ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿಸಲಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ ೧೦.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಸರಿಯಾದ ಸಮಯಕ್ಕೆ ಮುದ್ರಿತವಾಗಿ ಓದುಗರ ಕೈ ಸೇರುತ್ತಿದೆ ಎಂಬ ಮಾಹಿತಿ ಇದೆ.