ಕನ್ನಡ ಪತ್ರಿಕಾ ಲೋಕ (ಭಾಗ ೧೧೯) - ಮಲೆನಾಡ ಮಾರುತ

ಕನ್ನಡ ಪತ್ರಿಕಾ ಲೋಕ (ಭಾಗ ೧೧೯) - ಮಲೆನಾಡ ಮಾರುತ

ಸಂತೋಷ್ ಕುಮಾರ್ ಬಳ್ಮನೆ ಇವರ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಮಲೆನಾಡ ಮಾರುತ". ಟ್ಯಾಬಲಾಯ್ಡ್ ಆಕಾರದ ೮ ಕಪ್ಪು ಬಿಳುಪು ಪುಟಗಳು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲಾಯಿ ೧೦, ೨೦೨೩ (ಸಂಪುಟ ೧, ಸಂಚಿಕೆ ೧೫) ರ ಸಂಚಿಕೆ. ಈ ಸಂಚಿಕೆಯಲ್ಲಿ ರಾಜಕೀಯ ಸುದ್ದಿಗಳು ಇವೆ. ಹೊಸ ಚುನಾಯಿತ ಜನ ಪ್ರತಿನಿಧಿಗಳಿಗೆ ಶುಭ ಹಾರೈಸುವ ಜಾಹೀರಾತುಗಳು ಪತ್ರಿಕೆಯ ತುಂಬೆಲ್ಲಾ ಇದೆ. 

ಸಂಪಾದಕರಾದ ಸಂತೋಷ ಕುಮಾರ್ ಬಳ್ಮನೆ ಇವರು “ನಡೆಯುವ ದಾರಿಯಲ್ಲಿ ನಿಯತ್ತಿದ್ದರೆ, ತಡೆಯುವ ತಾಕತ್ತು ಯಾರಿಗೂ ಇಲ್ಲ..." ಎನ್ನುವ ಸಂಪಾದಕೀಯ ಬರೆದಿದ್ದಾರೆ. ಉಳಿದಂತೆ “ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ" ಎನ್ನುವ ಮುಖಪುಟ ಲೇಖನವಿದೆ. ಪತ್ರಿಕೆಯು ಪ್ರತೀ ಹದಿನೈದು ದಿನಕ್ಕೊಮ್ಮೆ ಮಂಗಳೂರಿನ ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿಸಲಾಗುತ್ತಿದೆ. ಪತ್ರಿಕೆಯ ಕಚೇರಿಯು ಕುಂದಾಪುರ ತಾಲೂಕಿನ ಅಮಾಸೆಬೈಲಿನ ಬಳ್ಮನೆ ಎಂಬಲ್ಲಿದೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ. ೬.೦೦, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆ.