ಕನ್ನಡ ಪತ್ರಿಕಾ ಲೋಕ (ಭಾಗ ೧೩೮) - ಈ ನಾಡಿನ ಮುಂಗಾರು

ಕನ್ನಡ ಪತ್ರಿಕಾ ಲೋಕ (ಭಾಗ ೧೩೮) - ಈ ನಾಡಿನ ಮುಂಗಾರು

ಮಂಗಳೂರು ಮಹಾನಗರದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಈ ನಾಡಿನ ಮುಂಗಾರು".

ಕವಿ, ಗಾಯಕ ಗಂಗಾಧರ ಗಾಂಧಿಯವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ಈ ಪತ್ರಿಕೆ 1997ರಲ್ಲಿ ಆರಂಭವಾಗಿ, ಇದೇ ವರ್ಷ ಕೊನೆಗೊಂಡಿತು. ಫೆಬ್ರವರಿ 17, "ಈ ನಾಡಿನ ಮುಂಗಾರು" ವಿನ ಮೊದಲ ಸಂಚಿಕೆ.

ಟ್ಯಾಬ್ಲಾಯ್ಡ್ ನಲ್ಲಿ ಎಂಟು ಪುಟಗಳಲ್ಲಿ ಬರುತ್ತಿದ್ದ ಪತ್ರಿಕೆ ಡಿಟಿಪಿ ಕೆಲಸಗಳು ಮಂಗಳೂರಿನ ಸೌಮ್ಯಾ ಗ್ರಾಫಿಕ್ಸ್ ನಲ್ಲಿ ನಡೆಯುತ್ತಿತ್ತು. ಸೀತಾರಾಮ ಶೆಟ್ಟಿ ಮುದ್ರಕರಾಗಿದ್ದರು.

~ ಶ್ರೀರಾಮ ದಿವಾಣ

ವಿ.ಸೂ: ಪತ್ರಿಕೆಯ ಮುಖಪುಟ ಲಭ್ಯವಿಲ್ಲದ ಕಾರಣ ಒಳಗಿನ ಪುಟವನ್ನೇ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಓದುಗರ ಬಳಿ ಈ ಪತ್ರಿಕೆಯ ಪ್ರತಿ ಇದ್ದಲ್ಲಿ ದಯವಿಟ್ಟು ಪ್ರತಿಕ್ರಿಯೆಯಲ್ಲಿ ತಿಳಿಸಬೇಕಾಗಿ ವಿನಂತಿ.