ಕನ್ನಡ ಪತ್ರಿಕಾ ಲೋಕ (ಭಾಗ ೧೪೨) - ಕಲಾ

ಕನ್ನಡ ಪತ್ರಿಕಾ ಲೋಕ (ಭಾಗ ೧೪೨) - ಕಲಾ

ಯಲ್ಲೂರು ಉಮೇಶ್ ರಾವ್ ಅವರ ಮಾಸಪತ್ರಿಕೆ "ಕಲಾ"

ಯಲ್ಲೂರು ಉಮೇಶ್ ರಾವ್ ಅವರು 'ಕಲೆ ಸಾಹಿತ್ಯಗಳ ಕೈಗನ್ನಡಿ'ಯಾಗಿ ಮಂಗಳೂರಿನಿಂದ ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಕಲಾ". 1948ರ ಫೆಬ್ರವರಿ ತಿಂಗಳ ಸಂಚಿಕೆಯೊಂದಿಗೆ ಆರಂಭಿಸಿದ "ಕಲಾ", ಎಷ್ಟು ಕಾಲ ಪ್ರಕಟವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮಂಗಳೂರಿನ ಹಂಪನಕಟ್ಟೆಯಲ್ಲಿ ಪತ್ರಿಕೆಯ ಕಾರ್ಯಾಲಯವಿತ್ತು.

64 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ " ಕಲಾ" ಮಾಸಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಆರಾಣೆ ಆಗಿತ್ತು. ಮುಖಪುಟವನ್ನು ಡಬಲ್ ಕಲರ್ ನಲ್ಲಿ ಮುದ್ರಿಸಲಾಗುತ್ತಿತ್ತು. ಎಚ್. ಎಸ್. ಒಡೆಯಾರ್ ಅವರ ಮುಸ್ಲೀಂ ಪ್ರಿಂಟಿಂಗ್ ಏಂಡ್ ಪಬ್ಲಿಷಿಂಗ್ ಹೌಸ್ ನಲ್ಲಿ ಮುದ್ರಣವಾಗುತ್ತಿತ್ತು.

ವೆಂಕಟಾಚಲಯ್ಯ, ವಿದ್ವಾನ್ ಐರೋಡಿ ಯಜ್ಞ ನಾರಾಯಣ ಉಡುಪ ಬೈಂದೂರು, ಕಾ. ವಿಟ್ಟಲ ಶೆಟ್ಟಿ ಕಾಸರಗೋಡು, ಯಂ. ವೆಂಕಟೇಶ ಪ್ರಭು, ರಾ. ಮೊ. ವಿಶ್ವಾಮಿತ್ರ (ರಾಮ ಮೊಳೆಯಾರ), ಬಿ. ಪದ್ಮನಾಭ ಸೋಮಯಾಜಿ, ವೈದ್ಯಗುರು ಎಂ. ಆರ್. ಭಟ್ ಉಡುಪಿ, ಮು. ಶಂ. ಕೇಶವ, ಕೆ. ಪ್ರಭಾಕರ ರಾವ್ ಉಡುಪಿ, ಅಮ್ಮೆಂಬಳ ಅನಂತಯ್ಯ ನಾವಡ, ಬಾಗಲೋಡಿ ದೇವರಾಯ, ಮ. ನವೀನಚಂದ್ರ, ಸ. ರೈ, 'ಗೋಪಿನಾಥ' ಆದರ್ಶಕೂಟ, ಮುಂಬಯಿ, ಪಿ. ವಿ. ಉಪಾಧ್ಯಾಯ ಕಾರ್ಕಳ  ಮೊದಲಾದವರ ವೈವಿಧ್ಯಮಯ ಬರೆಹಗಳು "ಕಲಾ" ದಲ್ಲಿ ಪ್ರಕಟವಾಗುತ್ತಿದ್ದುವು.

~ ಶ್ರೀರಾಮ ದಿವಾಣ