ಕನ್ನಡ ಪತ್ರಿಕಾ ಲೋಕ (ಭಾಗ ೧೬೪) - ವಿಕ್ರಾಂತ ಕರ್ನಾಟಕ

ಕನ್ನಡ ಪತ್ರಿಕಾ ಲೋಕ (ಭಾಗ ೧೬೪) - ವಿಕ್ರಾಂತ ಕರ್ನಾಟಕ

ಬೆಂಗಳೂರಿನಿಂದ ಪ್ರಕಟವಾಗಿ ರಾಜ್ಯಾದ್ಯಂತ ಪ್ರಸಾರ ಹೊಂದಿದ್ದ ವಾರಪತ್ರಿಕೆ "ವಿಕ್ರಾಂತ ಕರ್ನಾಟಕ".

ಪ್ರಸ್ತುತ, ಕೆ. ಆರ್. ಎಸ್ ಪಕ್ಷದ ನಾಯಕರಾಗಿರುವ ರವಿಕೃಷ್ಣಾ ರೆಡ್ಡಿಯವರು ಆರಂಭಿಸಿ ಎರಡು ವರ್ಷಗಳ ಕಾಲ ನಡೆಸಿದ "ವಿಕ್ರಾಂತ ಕರ್ನಾಟಕ"ವನ್ನು ಆನಂತರ ಕೆಲವು ವರ್ಷಗಳ ಕಾಲ ಯೋಜನಾ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಬಿ. ಪ್ರಸನ್ನಯ್ಯ ಅವರು ಮುನ್ನಡೆಸಿದರು. 2006 ಸೆಪ್ಟೆಂಬರ್ ನಲ್ಲಿ ಹಿರಿಯ ಪತ್ರಕರ್ತರಾದ ರವೀಂದ್ರ ರೇಷ್ಮೆಯವರ ಗೌರವ ಸಂಪಾದಕತ್ವದಲ್ಲಿ  ಆರಂಭವಾದ "ವಿಕ್ರಾಂತ ಕರ್ನಾಟಕ" 68 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು.

ಬಿ. ಪ್ರಸನ್ನಯ್ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದರು. ಬಸವರಾಜು ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಬಿ. ಎಸ್. ವಿದ್ಯಾರಣ್ಯ ವ್ಯವಸ್ಥಾಪಕ ಸಂಪಾದಕರಾಗಿದ್ದರು. ಕಗ್ಗೆರೆ ಪ್ರಕಾಶ್, ಪಿ. ಕೆ. ಮಲ್ಲನಗೌಡರ್ ಹಾಗೂ ನಾಗಮಣಿ ಉಪ ಸಂಪಾದಕರಾಗಿದ್ದರು. ರವಿಕೃಷ್ಣಾ ರೆಡ್ಡಿ, ಡಿ. ಎಸ್. ನಾಗಭೂಷಣ, ಡಾ|| ಕೆ. ಎಂ. ಶ್ರೀನಿವಾಸ ಗೌಡ, ಅರವಿಂದ ಚೊಕ್ಕಾಡಿ ಹಾಗೂ ಸಿದ್ದು ಯಾಪಲಪರವಿ ಸಂಪಾದಕೀಯ ಸಲಹೆಗಾರರಾಗಿದ್ದರು. ಮುಖಪುಟ ಮತ್ತು ಸಂಚಿಕೆ ವಿನ್ಯಾಸವನ್ನು ಮುರಳೀಧರ ವಿ. ರಾಠೋಡ್ ಹಾಗೂ ಆನೇಕಲ್ ನಾರಾಯಣ ಮಾಡುತ್ತಿದ್ದರು. 

ಎಲ್. ಸುಬ್ರಮಣಿ ಹಾಗೂ ಪರಮೇಶ್ವರ ಬಿ. ಎ. ಪ್ರಸರಣಾಧಿಕಾರಿಗಳಾಗಿದ್ದರು. ಆನಂದ್ ಅಂದಲಗಿ ಸಹಾಯಕರಾಗಿದ್ದರು. ಶ್ರೀಮತಿ ವಿ. ಎಲ್. ಕಾಡದೇವರಮಠ ಜಾಹೀರಾತು ವಿಭಾಗದ ವ್ಯವಸ್ಥಾಪಕರಾಗಿದ್ದರು. ಎಸ್. ಪವಿತ್ರ, ನವೀನ್ ಸಿ. ಹಾಗೂ ಬಾಬು ಎನ್. ಕಚೇರಿ ಸಹಾಯಕರಾಗಿದ್ದರು. ಎಂ. ಜಿ. ರಸ್ತೆಯ ಪ್ರೆಸ್ಟೀಜ್ ಮೆರಿಡಿಯನ್ 2 ನಲ್ಲಿ  ಪತ್ರಿಕೆಯ ಸಂಪಾದಕೀಯ ವಿಭಾಗದ ಕಾರ್ಯಾಲಯವಿತ್ತು. ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಪ್ರಸರಣ ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಚೋಳೂರಪಾಲ್ಯದಲ್ಲಿದ್ದ ಸತ್ಯಾನಂದ ಪ್ರಿಂಟರ್ಸ್ ನಲ್ಲಿ ವಿಕ್ರಾಂತ ಕರ್ನಾಟಕ ಮುದ್ರಣವಾಗುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿಗಳಾಗಿತ್ತು.

-ಶ್ರೀರಾಮ ದಿವಾಣ