ಕನ್ನಡ ಪತ್ರಿಕಾ ಲೋಕ (ಭಾಗ ೧೬೮) ಸಂಚಯ

ಕನ್ನಡ ಪತ್ರಿಕಾ ಲೋಕ (ಭಾಗ ೧೬೮) ಸಂಚಯ

ಕೃಷ್ಣಮೂರ್ತಿ ಚಿತ್ರಾಪುರ ಅವರ "ಸಂಚಯ"

ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಶೈಕ್ಷಣಿಕ ಮಾಸಪತ್ರಿಕೆ "ಸಂಚಯ". ಕೃಷ್ಣಮೂರ್ತಿ ಚಿತ್ರಾಪುರ ಇದನ್ನು ಮುನ್ನಡೆಸುತ್ತಿದ್ದವರು. 2004 ಮತ್ತು 2005ರಲ್ಲಿ ಹೀಗೆ ಎರಡು ವರ್ಷಳ ಕಾಲ ಮಾತ್ರ ನಡೆದ "ಸಂಚಯ"ದಲ್ಲಿ ಮಕ್ಕಳ ಶಿಕ್ಷಣ, ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ, ವಿಜ್ಞಾನ, ಪರಿಸರ, ಪ್ರವಾಸ ಇತ್ಯಾದಿ ಸದಭಿರುಚಿಯ ಬರಹಗಳು ಆದ್ಯತೆಯಲ್ಲಿ  ಪ್ರಕಟವಾಗುತ್ತಿತ್ತು.

36 ಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರು ಆಂಡೋಪೌಲ್ ಪುತ್ತೂರು ಆಗಿದ್ದರು. ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಣವಾಗುತ್ತಿತ್ತು. ಬಿಜೈ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿಯ ರೀಗಲ್ ಟವರ್ಸ್ ನಲ್ಲಿ "ಸಂಚಯ" ಪತ್ರಿಕಾಲಯ ಕಾರ್ಯವೆಸಗುತ್ತಿತ್ತು.

~ ಶ್ರೀರಾಮ ದಿವಾಣ