ಕನ್ನಡ ಪತ್ರಿಕಾ ಲೋಕ (ಭಾಗ ೧೮೧) - ಹೊನ್ನಾರು

ಕನ್ನಡ ಪತ್ರಿಕಾ ಲೋಕ (ಭಾಗ ೧೮೧) - ಹೊನ್ನಾರು

ಉಜ್ಜಜ್ಜಿ ರಾಜಣ್ಣ ಅವರ "ಹೊನ್ನಾರು"

ತಿಪಟೂರು ವಿದ್ಯಾನಗರದ ಉಜ್ಜಜ್ಜಿ ರಾಜಣ್ಣ ಅವರು ಸಂಪಾದಕರು, ಪ್ರಕಾಶಕರು,  ಮಾಲಕರು ಮತ್ತು ಮುದ್ರಕರಾಗಿ ಐದು ವರ್ಷಗಳ ಕಾಲ ಮುನ್ನಡೆಸಿದ ಮಾಸಪತ್ರಿಕೆ "ಹೊನ್ನಾರು". 2003ರಲ್ಲಿ ಆರಂಭವಾದ ಹೊನ್ನಾರು, 40 ಪುಟಗಳಿಂದ ಕೂಡಿ ಪುಸ್ತಕ ರೂಪದಲ್ಲಿ ಬರುತ್ತಿತ್ತು. ಬಿಡಿ ಸಂಚಿಕೆಯ ಬೆಲೆ 15 ರೂಪಾಯಿಗಳಾಗಿತ್ತು. ತಿಪಟೂರಿನ ಶ್ರೀ ಭೈರವಿ ಗ್ರಾಫಿಕ್ಸ್ ನಲ್ಲಿ ಪತ್ರಿಕೆಯ ಡಿಟಿಪಿ ಕೆಲಸ ನಡೆಯುತ್ತಿತ್ತು.

ಡಾ. ಬಂಜಗೆರೆ ಜಯಪ್ರಕಾಶ್, ಎಣ್ಣೆಗೆರೆ ಆರ್. ಸಿದ್ಧಹನುಮಯ್ಯ, ಎಂ. ವಿ., ಡಾ. ಮೊಗಳ್ಳಿ ಗಣೇಶ್, ಕೃಷ್ಣಮೂರ್ತಿ ಬಿಳಿಗೆರೆ, ಜೆ. ಬಾಲಕೃಷ್ಣ, ಎನ್. ಪಿ. ನಾಗರಾಜ್, ಡಾ. ರಘುಪತಿ, ತರಬೇನಹಳ್ಳಿ ಷಡಕ್ಷರಿ, ಡಾ. ಆರ್. ಕೃಷ್ಣ ಮನೋಹರ್, ಡಾ. ಮಲ್ಲಿಕಾರ್ಜುನ ಬಿರಾದಾರ್ ಬೆಂಗಳೂರು, ಮಂಗ್ಳೂರ ವಿಜಯ, ಸತೀಶ್ ತಿಪಟೂರು, ಬಿ. ವಿ. ಗಂಗಾಧರಸ್ವಾಮಿ, ಶ್ರೀಧರ ದೇವರಹಳ್ಳಿ, ರಘುನಾಥ, ತು. ರಾ. ಸು. ಮೊದಲಾದ ಅನೇಕ ಬರಹಗಾರರ ಬರಹಗಳು ಹೊನ್ನಾರುವಿನಲ್ಲಿ ಪ್ರಕಟವಾಗುತ್ತಿತ್ತು.

ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಕೃಷಿ, ಸಮಾಜ, ಪ್ರವಾಸ, ಪರಿಸರ, ವಿಜ್ಞಾನ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಬರಹಗಳಿಗೂ ಹೊನ್ನಾರುವಿನಲ್ಲಿ ಆದ್ಯತೆಯ ಸ್ಥಾನವಿತ್ತು.

~ ಶ್ರೀರಾಮ ದಿವಾಣ