ಕನ್ನಡ ಪತ್ರಿಕಾ ಲೋಕ (ಭಾಗ ೧೮೭)- ಕ್ಷಿತಿಜ

ಕನ್ನಡ ಪತ್ರಿಕಾ ಲೋಕ (ಭಾಗ ೧೮೭)- ಕ್ಷಿತಿಜ

ಶಶಿಧರ ಹೆಮ್ಮಣ್ಣ ಅವರ "ಕ್ಷಿತಿಜ"

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನವರಾದ ಕೆ. ಶಶಿಧರ ಹೆಮ್ಮಣ್ಣ ಹಾಗೂ ಉಡುಪಿಯ ಗುರುಪ್ರಸಾದ್ ಭಟ್ ಎಂಬವರು ಸೇರಿಕೊಂಡು ಕೆಲ ವರ್ಷ ಕಾಲ ಉಡುಪಿಯಿಂದ ಪ್ರಕಟಿಸುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿದೆ "ಕ್ಷಿತಿಜ". ಸಂಪಾದಕರು ಮತ್ತು ಮುದ್ರಕರು ಶಶಿಧರ ಹೆಮ್ಮಣ್ಣ ಆಗಿದ್ದರು. ಪ್ರಕಾಶಕರು ಗುರುಪ್ರಸಾದ ಭಟ್ ಆಗಿದ್ದರು. ಆರಂಭದ ಕೆಲ ವರ್ಷ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಫೇಮಸ್ ಕಾಂಪ್ಲೆಕ್ಸ್ ನಲ್ಲಿ ಪತ್ರಿಕಾ ಕಾರ್ಯಾಲಯ ಇದ್ದರೆ, ನಂತರ ಮಿತ್ರ ಆಸ್ಪತ್ರೆ ಬಳಿಯ ಕಟ್ಟಡವೊಂದಕ್ಕೆ ಸ್ಥಳಾಂತರಿಸಿದ್ದರು.

2004ರ ಅವಧಿಯಲ್ಲಿ ಟ್ಯಾಬ್ಲಾಯ್ಡ್ ರೂಪದಲ್ಲಿ 16 ಪುಟಗಳಲ್ಲಿ ಪ್ರಕಟವಾಗುತ್ತಿದ್ದ "ಕ್ಷಿತಿಜ"ದ ಬಿಡಿ ಸಂಚಿಕೆಯ ಬೆಲೆ ಐದು ರೂಪಾಯಿಗಳಾಗಿತ್ತು. ರಾಜಕೀಯ, ಸಾಮಾಜಿಕ, ಅಪರಾಧ, ಪರಿಸರ, ಸಾಹಿತ್ಯ,   ನಾಗರಿಕ ಸಮಸ್ಯೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ಪ್ರಚಲಿತ ಕಾರ್ಯಕ್ರಮಗಳ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅಂಬ್ರಯ್ಯ ಮಠ ಹೊಸಂಗಡಿ ಅವರ " ಬೆಳ್ಳಿ ಬೆಳಕಿಂಡಿ" ಅಂಕಣ ಪ್ರತೀ ಸಂಚಿಕೆಯಲ್ಲೂ ಇರುತ್ತಿತ್ತು. ಶಶಿಧರ ಹೆಮ್ಮಣ್ಣ, ಗುರುಪ್ರಸಾದ್ ಭಟ್ ಇಬ್ಬರೂ ಈಗಿಲ್ಲ.

~ ಶ್ರೀರಾಮ ದಿವಾಣ, ಉಡುಪಿ