ಕನ್ನಡ ಪತ್ರಿಕಾ ಲೋಕ (ಭಾಗ ೧೯೪) - ಸುದ್ದಿಮೂಲ

ಬಸವರಾಜ ಸ್ವಾಮಿಯವರ ಮನ-ಮನೆಯ ದಿನಪತ್ರಿಕೆ ‘ಸುದ್ದಿಮೂಲ’
ರಾಯಚೂರು ಜಿಲ್ಲೆಯಿಂದ ಪ್ರಕಾಶಿತ, ಕರ್ನಾಟಕ ರಾಜ್ಯದಾದ್ಯಂತ ಪ್ರಸಾರ ಹೊಂದಿರುವ ಕನ್ನಡ ದಿನಪತ್ರಿಕೆಯೇ ಸುದ್ದಿಮೂಲ. ಕಳೆದ ೩೭ ವರ್ಷಗಳಿಂದ ಪ್ರಕಟವಾಗುತ್ತಿರುವ ಈ ದೈನಿಕದ ಸಂಪಾದಕರು ಬಸವರಾಜ ಸ್ವಾಮಿ. ಪ್ರಕಾಶಕರು ವಿಶ್ವನಾಥ ಬಸವರಾಜ ಸ್ವಾಮಿ. ವಾರ್ತಾಪತ್ರಿಕೆಯ ಆಕಾರದ ೮ ಪುಟಗಳು. ೨ ಪುಟಗಳು ಬಣ್ಣದಲ್ಲೂ, ಉಳಿದ ಪುಟಗಳು ಏಕವರ್ಣದಲ್ಲೂ ಮುದ್ರಣ.
ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಬೀದರ, ಬೆಂಗಳೂರು ನಗರ, ಗಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಮೊದಲಾದ ಜಿಲ್ಲೆಗಳಲ್ಲಿ ಸುದ್ದಿಮೂಲ ಪತ್ರಿಕೆ ಲಭ್ಯ. ಪತ್ರಿಕೆಯ ಮುಖ ಬೆಲೆ ರೂ ೩.೦೦. ಚಂದಾ ವಿವರಗಳ ಕುರಿತಾದ ಮಾಹಿತಿ ಲಭ್ಯವಿಲ್ಲ.
ಪತ್ರಿಕೆಯಲ್ಲಿ ಸಂಪಾದಕೀಯವಿಲ್ಲ. ಬಸವ ಗೀತೆ ಎನ್ನುವ ಸತ್ಯ ಸಂವಾದ ಅಂಕಣವಿದೆ. ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಲಾಗಿದೆ. ಜಾಹೀರಾತುಗಳು ಇವೆ. ಪತ್ರಿಕೆಯು ಸುದ್ದಿಮೂಲ ಪಬ್ಲಿಕೇಷನ್ಸ್ ರಾಯಚೂರು ಇಲ್ಲಿ ಮುದ್ರಿತವಾಗುತ್ತಿದೆ.