ಕನ್ನಡ ಪತ್ರಿಕಾ ಲೋಕ (ಭಾಗ ೯೫) - ದಾವಣಗೆರೆ ಕನ್ನಡ ರತ್ನ
ದಾವಣಗೆರೆ ಜಿಲ್ಲೆಯಿಂದ ಕಳೆದ ಹನ್ನೆರಡು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆಯೇ ‘ದಾವಣಗೆರೆ ಕನ್ನಡ ರತ್ನ'. ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಬಿ. ಅಣ್ಣಪ್ಪ ಇವರು. ಸಂಪಾದಕರು ಸಿ ಎಂ ಬಸವರಾಜು, ಮಾಲೀಕರು ಎಚ್ ಪಿ ಲತಾ ಹಾಗೂ ಮುದ್ರಕರು ಕೆ ಕೆ ಕಲ್ಯಾಣ್ ಕುಮಾರ್.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೬, ೨೦೨೨ (ಸಂಪುಟ: ೧೨, ಸಂಚಿಕೆ: ೭೪) ರದ್ದು. ಪತ್ರಿಕೆಯ ಗಾತ್ರ ವಾರ್ತಾ ಪತ್ರಿಕೆಯದ್ದಾಗಿದ್ದು ೬ ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣ. ಪತ್ರಿಕೆಯಲ್ಲಿ ಯಾವುದೇ ಜಾಹೀರಾತು ಇಲ್ಲದಿರುವುದು ವಿಶೇಷ. ರಾಜಕೀಯ, ಸಾಮಾಜಿಕ ಮೊದಲಾದ ಪ್ರಚಲಿತ ವಿದ್ಯಮಾನಗಳು ಪತ್ರಿಕೆಯ ಸುದ್ದಿಯಲ್ಲಿವೆ. ಪತ್ರಿಕೆಯಲ್ಲಿ ಸಂಪಾದಕೀಯ, ಅಂಕಣ ಬರಹಗಳು ಕಂಡು ಬರುತ್ತಿಲ್ಲ. ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಹಾಗೂ ಸಾವರ್ಕರ್ ಬಗ್ಗೆ ಪುಟ್ಟ ಲೇಖನಗಳಿವೆ.
ಪತ್ರಿಕೆಯ ಕಚೇರಿ ದಾವಣಗೆರೆ ಜಿಲ್ಲೆಯ ನಿಟ್ಟುವಲ್ಲಿ ಹೊಸ ಬಡಾವಣೆಯಲ್ಲಿದ್ದು, ಚಿಕ್ಕಮಗಳೂರಿನ ಮಲೆನಾಡು ಐಸಿರಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ.೩.೦೦. ಚಂದಾ ವಿವರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಪತ್ರಿಕೆ ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಹೊರಬರುತ್ತಿದೆ ಎಂಬ ಮಾಹಿತಿ ಇದೆ.