ಕನ್ನಡ ಪತ್ರಿಕಾ ಲೋಕ (೨೫) - ಗಾಂಧಿ ಬಜಾರ್

ಕನ್ನಡ ಪತ್ರಿಕಾ ಲೋಕ (೨೫) - ಗಾಂಧಿ ಬಜಾರ್

" ಗಾಂಧಿ ಬಜಾರ್" ಪತ್ರಿಕೆ ಆರಂಭವಾದುದು ೧೯೮೭ರಲ್ಲಿ. "ಬಾಕಿನ" ಎಂದೇ ಪ್ರಸಿದ್ಧರಾದ ಕೆ. ಎನ್. ಬಾಲಕೃಷ್ಣ ಅವರು ಈ ಸಾಹಿತ್ಯ ಮಾಸಿಕವನ್ನು ಬೆಂಗಳೂರಿನಿಂದ ಆರಂಭಿಸಿದ್ದರು. "ಪುಸ್ತಕ ಲೋಕದ ಪರಿಚಾರಕ" ಎಂಬ ಘೋಷಣೆಯೊಂದಿಗೆ ಬರುತ್ತಿದ್ದ "ಗಾಂಧಿ ಬಜಾರ್", ೨೬ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಬರುತ್ತಿತ್ತು.

ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು ಬಾಕಿನ ಅವರೇ ಆಗಿದ್ದರು. ಬೆಂಗಳೂರು ಬಸವನಗುಡಿಯಲ್ಲಿದ್ದ 'ಲಿಪಿ ಮುದ್ರಣ'ದಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.

ನಾಡಿನ ಅನೇಕ ಮಂದಿ ಪ್ರಮುಖ ಬರಹಗಾರರು "ಗಾಂಧಿ ಬಜಾರ್" ಗೆ ಬರೆಯುತ್ತಿದ್ದರು. ಸಾಹಿತ್ಯಿಕ ಮೌಲ್ಯದ ಪ್ರಬುದ್ಧ ಬರಹಗಳಿಗೆ ಮಾತ್ರ "ಗಾಂಧಿ ಬಜಾರ್" ಪತ್ರಿಕೆ ಆದ್ಯತೆ ನೀಡುತ್ತಿತ್ತು. ಜುಲೈ ೨೦೦೫ರಲ್ಲಿ ಬಿಡಿ ಪ್ರತಿಯ ಬೆಲೆ ರೂ.೪.೦೦ ಆಗಿತ್ತು.